HEALTH TIPS

ಆರ್‌ಎಸ್‌ಎಸ್ ಏಕತೆಯನ್ನು ಬಯಸುತ್ತದೆ: ಸುನೀಲ್ ಅಂಬೇಕರ್‌

ಮುಂಬೈ: ವಿಶ್ವವಿದ್ಯಾಲಯದ ಅನುದಾನ ಆಯೋಗದ(ಯುಜಿಸಿ) ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿರುವ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್‌ ಹಿರಿಯ ನಾಯಕರೊಬ್ಬರು, 'ಸಮಾಜದಲ್ಲಿ ಏಕತೆ ಇರಬೇಕೆಂದು ಸಂಘ ಬಯಸುತ್ತದೆ. ಅದನ್ನು ಕಾಪಾಡಲು ಸಂಘ ಸದಾ ಬದ್ಧವಾಗಿಯೇ ಹೆಜ್ಜೆ ಇಡುತ್ತದೆ' ಎಂದು ಹೇಳಿದರು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಗೆ ಸಮಿತಿಯನ್ನು ರಚಿಸುವಂತೆ ಯುಜಿಸಿ ಅಧಿಸೂಚನೆ ಹೊರಡಿಸಿತ್ತು. ಈ ನಿಯಮಗಳು ಸಮಾಜದ ವಿಭಜನೆಗೆ ಕಾರಣವಾಗಬಹುದು ಎಂದು ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ ಪಾತ್ರದ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್, 'ದೇಶದ ಸಾರ್ವಭೌಮತೆ ಮತ್ತು ಏಕತೆಗಾಗಿ ಆರ್‌ಎಸ್‌ಎಸ್‌ ಎನು ಮಾಡಿದೆ ಎಂಬುವುದನ್ನು ನೂರು ವರ್ಷ ಪೂರೈಸಿದ ಬಳಿಕವೂ ವಿವರಿಸುವ ಅಗತ್ಯವಿಲ್ಲ ಎಂದರು.

'ಸಂಘ ದೇಶಕ್ಕಾಗಿ ಏನು ಮಾಡಿದೆಯೋ, ಅದೇ ಉದ್ದೇಶಕ್ಕಾಗಿಯೇ ಸ್ಥಾಪನೆಯಾಗಿತ್ತು' ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries