HEALTH TIPS

ಗ್ರೇಟ್‌ ನಿಕೋಬಾರ್‌ ಯೋಜನೆ; ಅಭಿವೃದ್ಧಿಗಿಂತ ಪರಿಸರ ಮುಖ್ಯ: ದೇಬಿ ಗೋಯೆಂಕಾ

ನವದೆಹಲಿ:‌ ನಿಕೋಬಾರ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ಆದೇಶವು, ಅಭಿವೃದ್ಧಿಯೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಳ್ಳದೆ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿತ್ತು ಎಂದು ಕನ್ಸರ್ವೇಷನ್‌ ಆಯಕ್ಷನ್‌ ಟ್ರಸ್ಟ್‌ನ (ಸಿಎಟಿ) ಕಾರ್ಯಕಾರಿ ಟ್ರಸ್ಟಿ ದೇಬಿ ಗೋಯೆಂಕಾ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ₹81 ಸಾವಿರ ಕೋಟಿ ಮೊತ್ತದ ಗ್ರೇಟ್‌ ನಿಕೋಬಾರ್‌ ಮೆಗಾ ಇನ್‌ಫ್ರಾಸ್ಟ್ರಕ್ಚರ್‌ ಯೋಜನೆಗೆ ಅನುವು ಮಾಡಿಕೊಟ್ಟ ಕೆಲವೇ ದಿನಗಳ ನಂತರ ಈ ಹೇಳಿಕೆ ನೀಡಿದ್ದಾರೆ.

ಪರಿಸರ ರಕ್ಷಣೆಗಾಗಿಯೇ ರಚಿಸಲಾಗಿರುವ ಸ್ವಯಂ ಸೇವಾಸಂಸ್ಥೆ ಸಿಎಟಿ, ಆರಂಭದಲ್ಲಿ ಈ ದಾವೆಯ ಭಾಗವಾಗಿತ್ತು. ಎನ್‌ಜಿಟಿಗೂ ಮೊದಲು ಯೋಜನೆಗೆ ನೀಡಲಾಗಿದ್ದ ಪರಿಸರ ಅನುಮತಿಯನ್ನು 2022ರಲ್ಲಿ ಪ್ರಶ್ನಿಸಿತ್ತು. ಆಗ, ಯೋಜನೆಯ ಅನುಮೋದನೆಯಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಮಂಡಳಿ ನಿರಾಕರಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries