HEALTH TIPS

ಡಿಸೆಂಬರ್‌ನಲ್ಲಿ ಇಂಡಿಗೋದಿಂದ ವಿಮಾನಗಳ ಹಾರಾಟ ರದ್ದು: ತನಿಖೆಗೆ ಸಿಸಿಐ ಆದೇಶ

ನವದೆಹಲಿ: ಡಿಸೆಂಬರ್‌ನಲ್ಲಿ ಪೈಲೆಟ್‌ಗಳು ಹಾಗೂ ಸಿಬ್ಬಂದಿಯ ಕೊರೆತೆ ಉಲ್ಲೇಖಿಸಿ ವಿಮಾನಗಳನ್ನು ರದ್ದುಗೊಳಿಸುವ ಹಾಗೂ ವಿಳಂಬಗೊಳಿಸುವ ಮೂಲಕ ಇಂಡಿಗೋ ತನ್ನ ಪ್ರಾಬಲ್ಯವನ್ನು ದುರಪಯೋಗಪಡಿಸಿಕೊಂಡಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಭಾರತದ ಸ್ಫರ್ಧಾ ಆಯೋಗ ಬುಧವಾರ ಆದೇಶಿಸಿದೆ.

ದೇಶೀಯ ವಿಮಾನ ಯಾನ ಮಾರುಕಟ್ಟೆಯಲ್ಲಿ ಸುಮಾರು ಶೇ. 65ರಷ್ಟು ಪಾಲು ಹೊಂದಿರುವ ಇಂಡಿಗೊ ತನ್ನ ಸೇವೆಯನ್ನು ತಡೆ ಹಿಡಿದಿದೆ. ಕೃತಕ ಕೊರತೆಯನ್ನು ಸೃಷ್ಟಿಸಿದೆ. ಗರಿಷ್ಠ ಬೇಡಿಕೆಯ ಸಮಯದಲ್ಲಿ ಗ್ರಾಹಕರ ವಿಮಾನ ಪ್ರಯಾಣದ ಲಭ್ಯತೆಯನ್ನು ಮಿತಿಗೊಳಿಸಿದೆ ಎಂದು ಅದು ಹೇಳಿದೆ.

ಈ ಬಗ್ಗೆ 90 ದಿನಗಳ ಒಳಗೆ ತನಿಖಾ ವರದಿ ಸಲ್ಲಿಸುವಂತೆ ಭಾರತದ ಸ್ಪರ್ಧಾ ಆಯೋಗ ಇಂಡಿಗೋದ ಪ್ರಧಾನ ನಿರ್ದೇಶಕರಿಗೆ ಸೂಚಿಸಿದೆ.

ಟಿಕೆಟ್ ಮುಂಗಡ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಕೊನೆಯ ಕ್ಷಣದ ರದ್ಧತಿಯನ್ನು ಒಪ್ಪಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ ಎಂದು ಗಮನಿಸಲಾಗಿದೆ. ಅನಂತರ ಪ್ರಯಾಣಿಕರು ಹೆಚ್ಚಿನ ದರಕ್ಕೆ ಪರ್ಯಾಯ ವ್ಯವಸ್ಥೆಯನ್ನು ತಾವಾಗಿಯೇ ಕಂಡು ಕೊಳ್ಳಬೇಕಾಯಿತು ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries