ವಾಷಿಂಗ್ಟನ್: ಭಾರೀ ಉದ್ಯೋಗ ಕಡಿತದ ಕ್ರಮ ಕೈಗೊಂಡ ಕೆಲ ದಿನಗಳ ಬಳಿಕ ವಿಲ್ ಲೂಯಿಸ್ ʼವಾಷಿಂಗ್ಟನ್ ಪೋಸ್ಟ್' ಸುದ್ದಿಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ಪ್ರಕಾಶಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
2023ರಲ್ಲಿ ಹುದ್ದೆಗೆ ನೇಮಕಗೊಂಡಿದ್ದ ಲೂಯಿಸ್ ತಮ್ಮ ರಾಜೀನಾಮೆ ಪತ್ರವನ್ನು ಫೆಬ್ರವರಿ 7ರಂದು ಇ-ಮೇಲ್ ಮೂಲಕ ರವಾನಿಸಿದ್ದು ಎರಡು ವರ್ಷಗಳ ಸಾಂಸ್ಥಿಕ ರೂಪಾಂತರದ ನಂತರ ಇದು ಹುದ್ದೆಯಿಂದ ನಿರ್ಗಮಿಸಲು ಸೂಕ್ತ ಸಮಯವಾಗಿದೆ ಎಂದು ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಉದ್ಯೋಗ ಕಡಿತದಿಂದ 300ಕ್ಕೂ ಹೆಚ್ಚು ಪತ್ರಕರ್ತರು ಕೆಲಸ ಕಳೆದುಕೊಂಡಿರುವ ಬಗ್ಗೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿತ್ತು.

