HEALTH TIPS

ಉಕ್ರೇನ್ ಮೇಲೆ ರಶ್ಯದಿಂದ ಡ್ರೋನ್ ದಾಳಿ: ಇಂಧನ, ರೈಲ್ವೆ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿ

ಕೀವ್: ಉಕ್ರೇನ್‍ನಾದ್ಯಂತ ರಶ್ಯ ರವಿವಾರ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಇಂಧನ ಮತ್ತು ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿದೆ. ಹಲವು ವಸತಿ ಕಟ್ಟಡಗಳು ಧ್ವಂಸಗೊಂಡಿದ್ದು ಮಹಿಳಾ ಪೊಲೀಸರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರವಿವಾರ ಬೆಳಿಗ್ಗೆ 4 ಗಂಟೆಗೆ(ಸ್ಥಳೀಯ ಕಾಲಮಾನ) ರಾಜಧಾನಿ ಕೀವ್‍ನಲ್ಲಿ ವಾಯುದಾಳಿ ಮುನ್ನೆಚ್ಚರಿಕೆ ಮೊಳಗಿದ ಬೆನ್ನಲ್ಲೇ ಸರಣಿ ಸ್ಫೋಟ ಸಂಭವಿಸಿದೆ. ದಾಳಿಯನ್ನು ದೃಢಪಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ `ರಶ್ಯ ಶನಿವಾರ ತಡರಾತ್ರಿಯಿಂದ 300ಕ್ಕೂ ಹೆಚ್ಚು ಡ್ರೋನ್‍ಗಳು ಮತ್ತು ಸುಮಾರು 50 ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಇಂಧನ ಕ್ಷೇತ್ರವು ದಾಳಿಯ ಪ್ರಧಾನ ಗುರಿಯಾಗಿತ್ತು. ವಸತಿ ಕಟ್ಟಡಗಳು, ರೈಲ್ವೇ ವ್ಯವಸ್ಥೆಗೂ ಹಾನಿಯಾಗಿದೆ. ರಶ್ಯವು ರಾಜತಾಂತ್ರಿಕತೆಯ ಬದಲು ದಾಳಿಗೆ ಹೆಚ್ಚಿನ ಗಮನ ನೀಡುತ್ತಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

23 ವರ್ಷದ ಮಹಿಳಾ ಪೊಲೀಸ್ ಮೃತಪಟ್ಟಿದ್ದು, 4 ಮಕ್ಕಳ ಸಹಿತ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಮಧ್ಯೆ, ರಶ್ಯದ ಸೂಚನೆಯಂತೆ ಉಕ್ರೇನ್‍ನ ಹಿರಿಯ ನಾಯಕರನ್ನು ಹತ್ಯೆ ನಡೆಸಲು ಸಂಚು ನಡೆಸುತ್ತಿದ್ದ ಶಂಕೆಯಲ್ಲಿ ಉಕ್ರೇನ್ ಮತ್ತು ಮೊಲ್ದೊವಾದಲ್ಲಿ 10 ಮಂದಿಯನ್ನು ಬಂಧಿಸಿರುವುದಾಗಿ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries