HEALTH TIPS

ಇರಾನ್ ಬತ್ತಳಿಕೆಗೆ ಚೀನಾದ ಸೂಪರ್ಸಾನಿಕ್ ಕ್ಷಿಪಣಿ, ರಶ್ಯದ ಹಾವೋಕ್ ಹೆಲಿಕಾಪ್ಟರ್ ಸೇರ್ಪಡೆ

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಪಡೆಗಳನ್ನು ಜಮಾವಣೆಗೊಳಿಸುತ್ತಿರುವಂತೆಯೇ ಇರಾನ್ ಕೂಡಾ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸುತ್ತಿದ್ದು ಚೀನಾದಿಂದ ಎರಡು ಅತ್ಯಾಧುನಿಕ ಸೂಪರ್ಸಾನಿಕ್ ಕ್ಷಿಪಣಿಗಳನ್ನು ಖರೀದಿಸುವ ಒಪ್ಪಂದ ಬಹುತೇಕ ಪೂರ್ಣಗೊಂಡಿರುವುದಾಗಿ ವರದಿಯಾಗಿದೆ.

ಚೀನಾದ ಸಿಎಂ-302 ಬ್ಯಾಲಿಸ್ಟಿಕ್ ಕ್ಷಿಪಣಿಯು ವಿಶ್ವದ ಅತ್ಯುತ್ತಮ ಹಡಗು ನಾಶಕ ಕ್ರೂಸ್ ಕ್ಷಿಪಣಿಯಾಗಿದೆ. ಇದು ಕೆಳಮಟ್ಟದಲ್ಲಿ ಕ್ಷಿಪ್ರವಾಗಿ ಮತ್ತು ಶಬ್ದಾತೀತ ವೇಗದಲ್ಲಿ ಹಾರುತ್ತದೆ. ಶತ್ರುಗಳು ಪತ್ತೆಹಚ್ಚುವ ಮೊದಲೇ ಸುಮಾರು 290 ಕಿ.ಮೀ ದೂರದ ಗುರಿಗೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದೆ. ಹಡಗು, ಯುದ್ದವಿಮಾನ ಅಥವಾ ನೆಲದ ಮೇಲಿನ ಲಾಂಚರ್ಗಳಿಗೂ ಜೋಡಿಸಬಹುದು ಮತ್ತು ಭೂಮಿಯ ಮೇಲಿನ ಗುರಿಗಳನ್ನೂ ಹೊಡೆಯುವ ಸಾಮರ್ಥ್ಯ ಹೊಂದಿದೆ. ವಿಮಾನವಾಹಕ ನೌಕೆಯನ್ನು ಸಂಪೂರ್ಣವಾಗಿ ಮುಳುಗಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಇದರ ಜೊತೆಗೆ, ರಶ್ಯದ ಹ್ಯಾವೋಕ್ ದಾಳಿ ಹೆಲಿಕಾಪ್ಟರ್‌ಗಳು ಈಗಾಗಲೇ ಇರಾನ್ ತಲುಪಿದ್ದು ಇದನ್ನು ಕ್ರಿಜಾಂಟೆಮಾ-ಎಂ ಸೂಪರ್ಸಾನಿಕ್ ಟ್ಯಾಂಕ್ ವಿರೋಧಿ ಕ್ಷಿಪಣಿಯೊಂದಿಗೆ ಅಳವಡಿಸಿರುವುದಾಗಿ ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries