HEALTH TIPS

ಜಾಗತಿಕ ನಿರ್ಲಕ್ಷ್ಯ ಪಶ್ಚಿಮ ದಂಡೆಯ ಅಕ್ರಮ ವಶಕ್ಕೆ ಉತ್ತೇಜನ ನೀಡುತ್ತದೆ: ಆಯಮ್ನೆಸ್ಟಿ ಇಂಟರ್‌ ನ್ಯಾಶನಲ್

ಲಂಡನ್: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಡೆಸುತ್ತಿರುವ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಗಳ ಬಗ್ಗೆ ಅದರ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಳ್ಳಲು ಅಂತರರಾಷ್ಟ್ರೀಯ ಸಮುದಾಯ ವಿಫಲವಾಗಿರುವುದಕ್ಕೆ ಮಾನವಹಕ್ಕುಗಳ ಸಂಘಟನೆ ಆಯಮ್ನೆಸ್ಟಿ ಇಂಟರ್‌ ನ್ಯಾಶನಲ್ ಕಳವಳ ವ್ಯಕ್ತಪಡಿಸಿದೆ.

ಇದು ಫೆಲೆಸ್ತೀನ್ ಭೂಭಾಗವನ್ನು ವಶಪಡಿಸಿಕೊಳ್ಳುವ ಇಸ್ರೇಲ್ ನ ನಿರ್ಧಾರವನ್ನು ''ಬದಲಾಯಿಸಲು ಸಾಧ್ಯವಾಗದ'' ವಾಸ್ತವವನ್ನಾಗಿಸಿದೆ ಎಂದು ಅದು ಹೇಳಿದೆ.

ಜಾಗತಿಕ ಶಕ್ತಿಗಳು ಇಸ್ರೇಲ್‌ ಗೆ ನೀಡಿರುವ ವಿನಾಯಿತಿಯಿಂದ ಕಡುಬಲಪಂಥೀಯ ಬೆಂಜಮಿನ್ ನೆತನ್ಯಾಹು ಸರಕಾರ ಮತ್ತಷ್ಟು ಉತ್ತೇಜನಗೊಂಡಿದ್ದು, ಇದು ಪಶ್ಚಿಮ ದಂಡೆಯಾದ್ಯಂತ ಫೆಲೆಸ್ತೀನೀಯರನ್ನು ಹೊರದಬ್ಬುವ ಪ್ರಯತ್ನಗಳಿಗೆ ಬಲ ತುಂಬಿದೆ ಎಂದು ಗುರುವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಆಯಮ್ನೆಸ್ಟಿ ಇಂಟರ್‌ ನ್ಯಾಶನಲ್ ತಿಳಿಸಿದೆ.

''ಅಮೆರಿಕ ಸರಕಾರದ ನಿಶ್ಶರ್ತ ಬೆಂಬಲ ಹಾಗೂ ಗಾಝಾದಲ್ಲಿ ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಹತ್ಯೆ, ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿ ದಶಕಗಳ ಕಾಲ ನಡೆದ ಕಾನೂನುಬಾಹಿರ ಆಕ್ರಮಣದ ಅವಧಿಯ ಅಪರಾಧಗಳು ಮತ್ತು ಅದರ ವರ್ಣಭೇದ ವ್ಯವಸ್ಥೆಗೆ ಅಂತರರಾಷ್ಟ್ರೀಯ ಉತ್ತರದಾಯಿತ್ವದ ಕೊರತೆಯು ತನ್ನ ಅಕ್ರಮ ಚಟುವಟಿಕೆಗಳನ್ನು ಹೆಚ್ಚಿಸಲು ಇಸ್ರೇಲ್‌ ಗೆ ಉತ್ತೇಜನ ನೀಡಿವೆ'' ಎಂದು ಆಯಮ್ನೆಸ್ಟಿ ಇಂಟರ್‌ ನ್ಯಾಶನಲ್ ನ ಹಿರಿಯ ಸಂಶೋಧನಾ, ನೀತಿ ಮತ್ತು ಅಭಿಯಾನ ನಿರ್ದೇಶಕಿ ಗೆವಾರಾ ರೊಸಾಸ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries