HEALTH TIPS

ಗ್ರೇಡ್ ಆಧರಿತ ಚಾಲನಾ ಪರವಾನಗಿ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ; ಸಚಿವ ನಿತಿನ್ ಗಡ್ಕರಿ

ನವದೆಹಲಿ: ಜವಾಬ್ದಾರಿಯುತ ಚಾಲನೆಯನ್ನು ಉತ್ತೇಜಿಸಲು ಮತ್ತು ಅಪಘಾತಗಳನ್ನು ತಡೆಗಟ್ಟಲು, ಕೆಲವು ಸಂಚಾರ ನಿಯಮ ಉಲ್ಲಂಘನೆಗಳಿಗೆ ಪರವಾನಗಿ ರದ್ದತಿ ಸೇರಿದಂತೆ ಕಠಿಣ ನಿಬಂಧನೆಗಳೊಂದಿಗೆ ಗ್ರೇಡ್ ಆಧಾರಿತ ಚಾಲನಾ ಪರವಾನಗಿ ವ್ಯವಸ್ಥೆಯನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ.

ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು, ಅತಿ ವೇಗ, ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಮತ್ತು ಕುಡಿದು ವಾಹನ ಚಲಾಯಿಸುವುದು ಮುಂತಾದ ಅಂಶಗಳಿಂದಾಗಿ ದೇಶದಾದ್ಯಂತ ಪ್ರತಿ ವರ್ಷ ಸುಮಾರು 1.8 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕೈಗಾರಿಕಾ ಸಂಸ್ಥೆ ಸಿಐಐ ಆಯೋಜಿಸಿದ್ದ ರಸ್ತೆ ಸುರಕ್ಷತೆಯ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರ ಜೀವಗಳು ಅತ್ಯಂತ ಮುಖ್ಯವಾಗಿದ್ದು, ಸರ್ಕಾರವು ರಸ್ತೆ ಸುರಕ್ಷತೆಗೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರವು ಈಗಾಗಲೇ ಸಂಚಾರ ಉಲ್ಲಂಘನೆಗಳಿಗೆ ದಂಡವನ್ನು ಹೆಚ್ಚಿಸಿದೆ. ಆದರೆ, ದೊಡ್ಡ ಸಮಸ್ಯೆ ಎಂದರೆ ಜಾರಿ ಮಾಡುವುದಾಗಿದೆ. ಕಾನೂನಿನ ಬಗ್ಗೆ ಭಯ ಅಥವಾ ಗೌರವವಿಲ್ಲ ಎಂದು ಹೇಳಿದರು.

'ನಾವು ಚಾಲನಾ ಪರವಾನಗಿಗಳಲ್ಲಿ ಶ್ರೇಣೀಕೃತ ಅಂಕ ವ್ಯವಸ್ಥೆಯನ್ನು ತರುತ್ತಿದ್ದೇವೆ. ಇದರ ಅಡಿಯಲ್ಲಿ ಸಂಚಾರ ಅಪರಾಧಗಳಿಗೆ ಕೆಲವು ಅಂಕಗಳನ್ನು ಕಡಿತಗೊಳಿಸಬಹುದು. ಎಲ್ಲ ಅಂಕಗಳು ಕಡಿತಗೊಳಿಸಿದಾಗ, ಅಂತಹ ಚಾಲನಾ ಪರವಾನಗಿಯನ್ನು ಆರು ತಿಂಗಳವರೆಗೆ ಅಮಾನತುಗೊಳಿಸಬಹುದು ಅಥವಾ ಪುನರಾವರ್ತಿತ ಅಪರಾಧಗಳಿಗೆ ರದ್ದುಗೊಳಿಸಬಹುದು' ಎಂದರು.

'ನಾವು ಶೀಘ್ರದಲ್ಲೇ ಈ ಯೋಜನೆಯನ್ನು ಪ್ರಾರಂಭಿಸಲಿದ್ದೇವೆ. ರಸ್ತೆ ಸುರಕ್ಷತೆಯು ದೇಶದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ, ಭಾರತವು 5 ಲಕ್ಷ ಅಪಘಾತಗಳು ಮತ್ತು 1.8 ಲಕ್ಷ ಸಾವುಗಳಿಗೆ ಸಾಕ್ಷಿಯಾಗುತ್ತಿದೆ. ಈ ಸಾವುಗಳಲ್ಲಿ ಶೇ 72ರಷ್ಟು 18-45 ವರ್ಷ ವಯಸ್ಸಿನವರಾಗಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪಘಾತಕ್ಕೀಡಾದವರ ಸಂಖ್ಯೆ 10,119 ಮತ್ತು ಹೆಲ್ಮೆಟ್ ಬಳಸದ ಕಾರಣ ಸಾವುಗಳು 54,122 ಎಂದು ಗಡ್ಕರಿ ಹೇಳಿದರು.

ಸೀಟ್ ಬೆಲ್ಟ್ ಧರಿಸದ ಕಾರಣ 14,466 ಸಾವುಗಳು ಸಂಭವಿಸಿವೆ. ಆದರೆ, ಅತಿ ವೇಗದಿಂದ 1.2 ಲಕ್ಷ ಸಾವುಗಳು ಸಂಭವಿಸಿವೆ. ತಪ್ಪು ದಿಕ್ಕಿನಲ್ಲಿ ಚಾಲನೆ, ಕುಡಿದು ಚಾಲನೆ ಮತ್ತು ಮೊಬೈಲ್ ಫೋನ್ ಬಳಕೆ ಮಾಡುವುದು ಸಾವಿಗೆ ಪ್ರಮುಖ ಕಾರಣಗಳಾಗಿವೆ. ಚಿಕಿತ್ಸಾ ವೆಚ್ಚ ಮತ್ತು ಕಾನೂನು ವಿಧಿವಿಧಾನಗಳ ಬಗ್ಗೆ ಚಿಂತಿಸದೆ ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡುವಂತೆ ಸಚಿವರು ಸಾರ್ವಜನಿಕರನ್ನು ಒತ್ತಾಯಿಸಿದರು.

ಪಿಎಂ ರಹತ್ (ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲು ಮತ್ತು ಖಚಿತ ಚಿಕಿತ್ಸೆ) ಯೋಜನೆಯು ಅಪಘಾತ ಸಂತ್ರಸ್ತರಿಗೆ ತುರ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ಯೋಜನೆಯಡಿಯಲ್ಲಿ, ಯಾವುದೇ ವರ್ಗದ ರಸ್ತೆಯಲ್ಲಿ ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ಅಪಘಾತದ ದಿನಾಂಕದಿಂದ 7 ದಿನಗಳವರೆಗೆ ₹1.5 ಲಕ್ಷಗಳವರೆಗೆ ನಗದು ರಹಿತ ಚಿಕಿತ್ಸೆ ಪಡೆಯಲು ಅರ್ಹತೆ ನೀಡುತ್ತದೆ ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries