HEALTH TIPS

ಅಜಿತ್ ಪವಾರ್ ವಿಮಾನ ದುರಂತ: ಸಮಗ್ರ ತನಿಖೆಗೆ ಪುತ್ರ ಜಯ್ ಪವಾರ್ ಆಗ್ರಹ

ಪುಣೆ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್‌ ಹಾಗೂ ಇತರ ನಾಲ್ವರು ಸಾವಿಗೀಡಾದ ವಿಮಾನ ಪತನ ದುರಂತದ ಸಮಗ್ರ ತನಿಖೆ ನಡೆಸಲು ಅವರ ಕಿರಿಯ ಪುತ್ರ ಜಯ್ ಪವಾರ್ ಆಗ್ರಹಿಸಿದ್ದಾರೆ. 

ತಮ್ಮ ತಂದೆಯ ಸಾವಿಗೆ ಕಾರಣವಾದ ವಿಮಾನ ಅಪಘಾತದ ಹಿಂದಿನ ಸಂಭವನೀಯ ಗಂಭೀರ ಲೋಪಗಳ ಕುರಿತು ಸಮಗ್ರ ತನಿಖೆಯಾಗಬೇಕು.

ವಿಮಾನದ ಕಪ್ಪು ಪೆಟ್ಟಿಗೆಯನ್ನು ಸುಲಭವಾಗಿ ನಾಶಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಜ.28ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಎಸ್‌ಆರ್‌ ವೆಂಚರ್ಸ್‌ನ 'ಲಿಯರ್‌ಜೆಟ್‌-45' ವಿಮಾನವು ಪತನಗೊಂಡಿತ್ತು.

ಮಹಾರಾಷ್ಟ್ರದ ಜನರಿಗೆ ವಿಮಾನ ದುರಂತದ ಸಂಪೂರ್ಣ ಸತ್ಯವನ್ನು ತಿಳಿದುಕೊಳ್ಳುವ ಹಕ್ಕು ಇದೆ. ಪಾರದರ್ಶಕ ಹಾಗೂ ನಿಷ್ಪಕ್ಷವಾಗಿ ತನಿಖೆ ನಡೆಯಬೇಕು ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ವಿಎಸ್‌ಆರ್ ವಿಮಾನಯಾನ ಸಂಸ್ಥೆಯ ಮೇಲೆ ನಿಷೇಧ ಹೇರುವಂತೆಯೂ ಆಗ್ರಹಿಸಿದ್ದಾರೆ.

ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ವಿಮಾನ ದುರಂತಕ್ಕೆ ವಿಮಾನಯಾನ ಸಂಸ್ಥೆಯ ಕಾರಣ ಆಗಿರಬಹುದು. ಪೈಲಟ್‌ನ ನಿರ್ಲಕ್ಷ್ಯವೂ ಇರಬಹುದು. ಆದರೆ ಎಲ್ಲ ಆಯಾಮಗಳ ತನಿಖೆಯ ಬಳಿಕ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries