ಕಾಸರಗೋಡು: ನಿವೃತ್ತ ಶಿಕ್ಷಕ, ಖ್ಯಾತ ಯಕ್ಷಗಾನ ಕಲಾವಿದ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ, ಸಂಘಟಕ ಎನ್.ಚನಿಯಪ್ಪ ನಾಯ್ಕ್ ಅವರನ್ನು ಡಾ. ಕಯ್ಯಾರ ಕಿಞ್ಞಣ ರೈ ಅವರ ಹೆಸರಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ ಗಡಿಚೇತನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಾಸರಗೋಡಿನಲ್ಲಿ ಸಾಹಿತ್ಯ, ಸಾಮಾಜಿಕ, ಜಾನಪದ ಸಾಂಸ್ಕೃತಿಕ ರಂಗಗಳಲ್ಲೂ ಗುರುತಿಸಿಕೊಂಡಿರುವ ಚನಿಯಪ್ಪನಾಯ್ಕ್ ಅವರು, ಕನ್ನಡ ಕಾರ್ಯಕ್ರಮ ನಿರೂಪಕ, ಕನ್ನಡ ಉದ್ಘೋಷಕ, ಕಾರ್ಯಕ್ರಮ ಸಂಘಟಕರಾಗಿ ಸಲ್ಲಿಸಿರುವ ಸೇವೆ ಗುರುತಿಸಿ ಗಡಿನಾಡು ಚೇತನ ಪ್ರಶಸ್ತಿ ನೀಡಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾ?ಕಾರ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಹಾಗೂ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ತಿಳಿಸಿದ್ದಾರೆ.
ಚನಿಯಪ್ಪನಾಯ್ಕ್ ಅವರು ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕ ಬೆಂಗಳೂರು ನೀಡುವ 2026ನೇ ಸಾಲಿನ ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆಯಾಗಿದ್ದರು.


