HEALTH TIPS

ಕಾಞಂಗಾಡು ಕೆಎಸ್‍ಟಿಪಿ ರಸ್ತೆಯಲ್ಲಿ ಧೂಳಿನ ಸಮಸ್ಯೆ-ವಿದ್ಯಾರ್ಥಿ, ನಾಗರಿಕರಿಂದ ಪ್ರತಿಭಟನೆ

ಕಾಸರಗೋಡು: ನಗರದಿಂದ ಚೆಮ್ನಾಡು ಹಾದಿಯಾಗಿ ಕಾಞಂಗಾಡ್ ಸಂಚರಿಸುವ ಕೆಎಸ್‍ಟಿಪಿ ರಸ್ತೆಯಲ್ಲಿ ಹೆಚ್ಚಾಗಿರುವ ಧೂಳಿನ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಶಾಲಾ ವಿದ್ಯಾರ್ಥಿಗಳು, ಸಿಬ್ಬಂದಿ, ನಾಗರಿಕರು ರಸ್ತೆ ತಡೆ ನಿರ್ಮಿಸುವ ಮೂಲಕ ಪ್ರತಿಬಟನೆ ವ್ಯಕ್ತಪಡಿಸಿದರು. 

ಚೆಮ್ನಾಡು ಅಸೋಸಿಯೇಷನ್ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಧರಣಿ ಹಿನ್ನೆಲೆಯಲ್ಲಿ ತಾಸುಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. 

ರಸ್ತೆ ಮೇಲೆ ಕುಳಿತು ವಾಹನಗಳಿಗೆ ತಡೆಯೊಡ್ಡಿದ ಪ್ರತಿಭಟನಾಕಾರರನ್ನು ಮೇಲ್ಪರಂಬ ಠಾನೆ ಪೆÇಲೀಸರು ಆಗಮಿಸಿ ಚದುರಿಸಿದರು. ಜಮಾಅತ್ ಕಾರ್ಯದರ್ಶಿ ಸಿ.ಎಚ್. ಶಾಜು, ಹೋರಾಟ ಸಮಿತಿಯ ಸಂಚಾಲಕರಾದ ಅಬ್ದುಲ್ ಕಾದರ್, ಶಹಜಹಾನ್ ಅಲಿಚೇರಿ, ಹಫೀಶ್, ಸಫ್ರು ಚೆಮ್ನಾಡ್, ಅಪ್ರಾನ್, ಸಲೀಂ ಮೂಲ ನೇತೃತ್ವ ವಹಿಸಿದ್ದರು. 

ಕಾಸರಗೋಡು-ಕಾಞಣಗಾಡು ಕೆಎಸ್‍ಟಿಪಿ ರಸ್ತೆಯನ್ನು ದುರಸ್ತಿ ನೆಪದಲ್ಲಿ ಅಲ್ಲಲ್ಲಿ ಅಗೆದುಹಾಕಿ ಇದಕ್ಕೆ ಕಾಂಕ್ರೀಟ್ ಮಿಶ್ರಿತ ಜಲ್ಲಿ ಸುರಿದು ಮೇಲೆ ಡಾಂಬರೀಕರಣ ನಡೆಸದಿರುವುದರಿಂದ ವ್ಯಾಪಕ ಧೂಳಿಗೆ ಕಾರಣವಾಗಿದ್ದು, ಪ್ರಯಾಣಿಕರ ಸಂಚಾರಕ್ಕೆ ಹೆಚ್ಚಿನ ಸಂಕಷ್ಟ ಅನುಭವಿಸಬೇಕಾಗುತ್ತಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries