HEALTH TIPS

ಶಸ್ತ್ರಾಸ್ತ್ರ ಒಪ್ಪಿಸುವುದಿಲ್ಲ, ಗಾಝಾದಲ್ಲಿ ವಿದೇಶಿ ಆಡಳಿತ ಒಪ್ಪುವುದಿಲ್ಲ: ಹಮಾಸ್

ದೋಹಾ: ಹಮಾಸ್ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಿಲ್ಲ ಮತ್ತು ಗಾಝಾದಲ್ಲಿ ವಿದೇಶಿ ಹಸ್ತಕ್ಷೇಪವನ್ನು ಒಪ್ಪುವುದಿಲ್ಲ ಎಂದು ಹಮಾಸ್ ನ ಉನ್ನತ ನಾಯಕ ಖಾಲಿದ್‌ ಮಿಷಾಲ್ ಹೇಳಿದ್ದಾರೆ.

ಖತರ್ ರಾಜಧಾನಿ ದೋಹದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಖಾಲಿದ್‌ ಮಿಷಾಲ್, "ಪ್ರತಿರೋಧ, ಅದರ ಶಸ್ತ್ರಾಸ್ತ್ರಗಳು ಮತ್ತು ಅದನ್ನು ನಡೆಸಿದವರನ್ನು ಅಪರಾಧೀಕರಿಸುವುದನ್ನು ನಾವು ಒಪ್ಪಿಕೊಳ್ಳಬಾರದು.

ಆಕ್ರಮಣ ಇರುವವರೆಗೂ ಪ್ರತಿರೋಧ ಇದ್ದೇ ಇರುತ್ತದೆ. ಆಕ್ರಮಣದಡಿ ಪ್ರತಿರೋಧ ತೋರಿಸುವುದು ಜನರ ಹಕ್ಕು ಮತ್ತು ಇದಕ್ಕೆ ರಾಷ್ಟ್ರಗಳು ಹೆಮ್ಮೆ ಪಡುತ್ತವೆ" ಎಂದು ಹೇಳಿದ್ದಾರೆ. ಮಿಷಾಲ್ ಈ ಹಿಂದೆ ಹಮಾಸ್ ನ ಮುಖ್ಯಸ್ಥರಾಗಿದ್ದರು.

ಫೆಲೆಸ್ತೀನಿಯನ್ ಪ್ರದೇಶದಲ್ಲಿ ವಿದೇಶೀಯರ ಆಡಳಿತವನ್ನು ಹಮಾಸ್ ಸ್ವೀಕರಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಮಿಷಾಲ್, ಗಾಝಾ ಶಾಂತಿ ಮಂಡಳಿಯು ಗಾಝಾದ ಪುನರ್ನಿರ್ಮಾಣ ಮತ್ತು ಅದರ ಸುಮಾರು 2.2 ದಶಲಕ್ಷ ನಿವಾಸಿಗಳಿಗೆ ನೆರವು ಹರಿದು ಬರುವ ಸಮತೋಲಿತ ವಿಧಾನವನ್ನು ಅನುಸರಿಸಬೇಕು ಎಂದು ಆಗ್ರಹಿಸಿದರು. ನಾವು ನಮ್ಮ ರಾಷ್ಟ್ರೀಯ ಸಿದ್ದಾಂತಗಳಿಗೆ ಬದ್ಧರಾಗಿದ್ದೇವೆ ಮತ್ತು ಪೋಷಕತ್ವ(ಅಸಮರ್ಥರ ಪರವಾಗಿ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ), ಬಾಹ್ಯ ಹಸ್ತಕ್ಷೇಪ ಅಥವಾ ಯಾವುದೇ ರೀತಿಯ ಆದೇಶದ ತತ್ವವನ್ನು ತಿರಸ್ಕರಿಸುತ್ತೇವೆ. ಫೆಲೆಸ್ತೀನ್ ಅನ್ನು ಫೆಲೆಸ್ತೀನೀಯರೇ ಆಳಬೇಕು. ಗಾಝಾವು ಗಾಝಾ ಮತ್ತು ಫೆಲೆಸ್ತೀನ್ ನ ಜನತೆಗೆ ಸೇರಿದೆ. ನಾವು ವಿದೇಶಿ ಆಡಳಿತವನ್ನು ಒಪ್ಪುವುದಿಲ್ಲ ಎಂದವರು ಹೇಳಿರುವುದಾಗಿ ವರದಿಯಾಗಿದೆ.

ಗಾಝಾದಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ಎರಡನೇ ಹಂತದಲ್ಲಿ "ಗಾಝಾವನ್ನು ಮಿಲಿಟರಿ ರಹಿತ ವಲಯವನ್ನಾಗಿಸುವುದು, ಹಮಾಸ್ ಶಸ್ತ್ರಾಸ್ತ್ರ ಕೆಳಗಿಡುವುದು ಮತ್ತು ಈ ಪ್ರದೇಶದಿಂದ ಇಸ್ರೇಲ್ ತನ್ನ ಪಡೆಗಳನ್ನು ಕ್ರಮೇಣ ಹಿಂದಕ್ಕೆ ಪಡೆಯುವುದು" ಸೇರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries