HEALTH TIPS

ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಉ. ಪ್ರದೇಶದ ಹರ್ಡೋಯಿಯಲ್ಲಿ ಕಲ್ಲು ತೂರಾಟ

ನವದೆಹಲಿ: ಉತ್ತರ ಪ್ರದೇಶದ ಹರ್ಡೋಯಿ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ನಿನ್ನೆ ಗುರುವಾರ ಕಲ್ಲು ತೂರಾಟ ನಡೆದಿರುವುದು ವರದಿಯಾಗಿದೆ. ಈ ಘಟನೆಯಲ್ಲಿ ರೈಲಿನ ಸಿ4 ಬೋಗಿಗೆ ಹಾನಿಯಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಲಖನೌ-ದೆಹಲಿ ವಂದೇ ಭಾರತ್ ರೈಲಿನಲ್ಲಿ ಮೇರಟ್‌ಗೆ ಮರಳುತ್ತಿದ್ದ ವೇಳೆ ಹರ್ಡೋಯಿ ಜಿಲ್ಲೆಯ ಒಂದು ಗ್ರಾಮದಲ್ಲಿ ಈ ಕಲ್ಲು ತೂರಾಟ ನಡೆದಿದೆ. ಮೋಹನ್ ಭಾಗವತ್ ಅವರಿಗೆ ಯಾವುದೇ ಗಾಯವಾಗಿಲ್ಲ. ನಿನ್ನೆ ಮಧ್ಯಾಹ್ನ ಸುಮಾರು 3:20ಕ್ಕೆ ಹರ್ಡೋಯಿ ಜಿಲ್ಲೆಯ ಕೌಧಾ ಗ್ರಾಮದ ಸಮೀಪ ಈ ಘಟನೆ ನಡೆದಿದೆ. ಘಟನೆಯಲ್ಲಿ ರೈಲಿನ ಒಂದು ಕಿಟಕಿಯ ಗಾಜು ಒಡೆದಿದೆ.

ಆರ್‌ಪಿಎಫ್ ತನಿಖೆ ಆರಂಭ

ಈ ಪ್ರಕರಣದ ತನಿಖೆಯನ್ನು ಮೇರಟ್‌ನ ರೈಲ್ವೆ ರಕ್ಷಣಾ ಪಡೆ (RPF) ನಡೆಸಲಿದೆ. ತನಿಖೆಗಾಗಿ ವಿಶೇಷ ತಂಡವು ರಾತ್ರಿ ವೇಳೆಗೆ ಮೇರಟ್‌ಗೆ ತಲುಪುವ ನಿರೀಕ್ಷೆಯಿದೆ.

ಮೋಹನ್ ಭಾಗವತ್ ಸಂಪೂರ್ಣ ಸುರಕ್ಷಿತರಾಗಿದ್ದರು. ಅವರು ರಾತ್ರಿ ಸುಮಾರು 9 ಗಂಟೆಗೆ ತೀವ್ರ ಭದ್ರತೆಯ ನಡುವೆ ಮೇರಟ್ ರೈಲು ನಿಲ್ದಾಣದಲ್ಲಿ ಇಳಿದು, ಶತಾಬ್ದಿ ನಗರದಲ್ಲಿರುವ ಮಾಧವ ಕುಂಜ್‌ಗೆ ತೆರಳಿದರು. ಇಂದು ಮತ್ತು ನಾಳೆ ನಡೆಯುವ ಎರಡು ದಿನಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಕ್ರೀಡಾಪಟುಗಳು ಮತ್ತು ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಮುಂಬೈ-ಗೋವಾ ವಂದೇ ಭಾರತ್ ರೈಲು ಎಮ್ಮೆಗಳಿಗೆ ಡಿಕ್ಕಿ

ಫೆಬ್ರವರಿ 9ರಂದು ಮಹಾರಾಷ್ಟ್ರದ ಕುಡಾಲ್ ಮತ್ತು ಸಿಂಧುದುರ್ಗ ನಿಲ್ದಾಣಗಳ ಮಧ್ಯೆ ವಂದೇ ಭಾರತ್ ರೈಲು ಎಮ್ಮೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಮೇಲ್ದಂಡೆ ವಿದ್ಯುತ್ ವ್ಯವಸ್ಥೆಗೆ ಹಾನಿಯಾಗಿದ್ದು, ಮುಂಬೈ-ಗೋವಾ ಮಾರ್ಗದಲ್ಲಿ ರೈಲು ಸಂಚಾರ ಹಲವು ಗಂಟೆಗಳ ಕಾಲ ವ್ಯತ್ಯಯಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಮುಂಬೈನಿಂದ ಗೋವಾದ ಮಡಗಾಂವ್‌ಗೆ ತೆರಳುತ್ತಿದ್ದ ರೈಲು, ಹಳಿಗೆ ಬಂದಿದ್ದ ಮೂರು ಪಶುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಪೂರೈಕೆ ಪಡೆಯುವ ಮೇಲ್ದಂಡೆ ವ್ಯವಸ್ಥೆಗೆ ಹಾನಿಯಾಗಿದೆ.

ಘಟನೆಯ ಪರಿಣಾಮವಾಗಿ ಆ ವಿಭಾಗದಲ್ಲಿ ಸುಮಾರು 3 ಗಂಟೆಗಳ ಕಾಲ ರೈಲು ಸಂಚಾರ ವ್ಯತ್ಯಯಗೊಂಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries