HEALTH TIPS

ಮೋದಿ-ಮ್ಯಾಕ್ರನ್‌ ದ್ವಿಪಕ್ಷೀಯ ಸಭೆ: ವ್ಯಾಪಾರ, ರಕ್ಷಣಾ ಸಹಕಾರ ಕುರಿತು ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್ ಅವರೊಂದಿಗೆ ಮುಂಬೈನಲ್ಲಿ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 

ವ್ಯಾಪಾರ, ರಕ್ಷಣಾ ಸಹಕಾರ, ಇಂಧನ, ಅತ್ಯಾಧುನಿಕ ತಂತ್ರಜ್ಞಾನ, ಕೈಗಾರಿಕಾ ವಲಯದ ಸಹಕಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಣ ಸಂಬಂಧ ವೃದ್ಧಿ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

ಕೋಲಾರ ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್‌ (ಟಿಎಎಸ್‌ಎಲ್‌) ಮತ್ತು ಏರ್‌ಬಸ್‌ ಜಂಟಿಯಾಗಿ ಆರಂಭಿಸಿರುವ ಎಚ್‌ 125 ಹೆಲಿಕಾಪ್ಟರ್‌ ಅಂತಿಮ ಜೋಡಣಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರು ವರ್ಚುವಲ್‌ ಆಗಿ ಉದ್ಘಾಟಿಸಿದ್ದಾರೆ.

ಇದು ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ತಯಾರಿಕಾ ಘಟಕವಾಗಿದ್ದು, 2027ರಲ್ಲಿ ಮೊದಲ ಹೆಲಿಕಾಪ್ಟರ್‌ ಅನ್ನು ಹೊರತರುವ ನಿರೀಕ್ಷೆಯಿದೆ. ಉಭಯ ದೇಶಗಳ ನಡುವಿನ ಐದನೇ ದ್ವಿಪಕ್ಷೀಯ ಸಭೆ ನಡೆದ ಎರಡೂವರೆ ವರ್ಷಗಳ ನಂತರ ಈ ಸಭೆ ನಡೆಯಿತು.

114 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಭಾರತದ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದ ಬೆನ್ನಲ್ಲೇ ಮ್ಯಾಕ್ರನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಮಾತುಕತೆ ಸಂದರ್ಭದಲ್ಲಿ ರಕ್ಷಣಾ ಸಹಕಾರ ಮತ್ತು ಅತ್ಯಾಧುನಿಕ ತಂತ್ರಜ್ಞಾನ ವಲಯಗಳ ದ್ವಿಪಕ್ಷೀಯ ಒಪ್ಪಂದಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ, ಮ್ಯಾಕ್ರನ್‌ ಅವರೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈಗೆ ಬಂದಿಳಿದರು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಉಪ ಮುಖ್ಯಮಂತ್ರಿಗಳಾದ ಏಕನಾಥ ಶಿಂದೆ ಮತ್ತು ಸುನೇತ್ರಾ ಪವಾರ್‌ ಅವರು ಸ್ವಾಗತಿಸಿದರು. ನಂತರ ಮೋದಿ ಅವರು ದಕ್ಷಿಣ ಮುಂಬೈನ ಲೋಕಭವನಕ್ಕೆ ಪ್ರಯಾಣಿಸಿದರು.

ಮೋದಿ ಅವರ ಆಹ್ವಾನದ ಮೇರೆಗೆ ಮ್ಯಾಕ್ರನ್‌ ಅವರು ಭಾರತಕ್ಕೆ ಆಗಮಿಸಿದ್ದು, ಫೆಬ್ರುವರಿ 17ರಿಂದ 19ರವರೆಗೆ ಭಾರತದಲ್ಲಿ ಇರಲಿದ್ದಾರೆ. ಈ ಸಂದರ್ಭದಲ್ಲಿ ಎಐ ಶೃಂಗದಲ್ಲೂ ಭಾಗವಹಿಸಲಿದ್ದಾರೆ.

ಮೋದಿ ಹೇಳಿದ್ದೇನು?

ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷವನ್ನು ಪ್ರಾರಂಭಿಸುವುದರೊಂದಿಗೆ, ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಜನರ ಪಾಲುದಾರಿಕೆಯಾಗಿ ಪರಿವರ್ತಿಸುತ್ತಿದ್ದೇವೆ. ಏಕೆಂದರೆ ನಾವೀನ್ಯತೆ ಪ್ರತ್ಯೇಕವಾಗಿ ನಡೆಯುವುದಿಲ್ಲ. ಆದರೆ, ಸಹಯೋಗದ ಮೂಲಕ ಸಂಭವಿಸುತ್ತದೆ. ಆದ್ದರಿಂದ, ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷದಲ್ಲಿ ನಮ್ಮ ಗುರಿ ಜನರಿಂದ ಜನರಿಗೆ ಸಂಪರ್ಕವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ರಕ್ಷಣಾ ಸಹಕಾರ, ಇಂಧನ, ಬಾಹ್ಯಾಕಾಶ ಅಥವಾ ಉದಯೋನ್ಮುಖ ತಂತ್ರಜ್ಞಾನಗಳಾಗಿರಲಿ, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಸಮನ್ವಯತೆ ಸಾಧಿಸಬೇಕಿದೆ. ನಾವು ಸ್ಟಾರ್ಟ್‌ಅಪ್‌ಗಳು ಮತ್ತು ಎಸ್‌ಎಸ್‌ಎಂಇಗಳ ನಡುವೆ ಬಲವಾದ ಜಾಲಗಳನ್ನು ನಿರ್ಮಿಸುತ್ತೇವೆ. ಜತೆಗೆ, ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರ ನಡುವೆ ವಿನಿಮಯವನ್ನು ಸುಗಮಗೊಳಿಸುವ ಮೂಲಕ ಜಂಟಿ ನಾವೀನ್ಯತೆಗಾಗಿ ಹೊಸ ಕೇಂದ್ರಗಳನ್ನು ಸಹ ಸ್ಥಾಪಿಸುತ್ತೇವೆ' ಎಂದೂ ಅವರು ಹೇಳಿದ್ದಾರೆ.

ಮ್ಯಾಕ್ರನ್‌ ಹೇಳಿದ್ದೇನು?

'ಭಾರತಕ್ಕೆ ನನ್ನ ನಾಲ್ಕನೇ ಅಧಿಕೃತ ಭೇಟಿಯ ವೇಳೆ ಆತ್ಮೀಯ ಸ್ವಾಗತಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ. ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧವು ನಿಜಕ್ಕೂ ಗಮನಾರ್ಹ ಮತ್ತು ವಿಶಿಷ್ಟವಾಗಿದೆ. ಈ ಸಂಬಂಧವು ನಂಬಿಕೆ, ಮುಕ್ತತೆ ಮತ್ತು ಮಹತ್ವಾಕಾಂಕ್ಷೆಯದ್ದಾಗಿದೆ. ಈ ಪಾಲುದಾರಿಕೆಯನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ನಾವು ಇಂದು ನಿರ್ಧರಿಸಿದ್ದೇವೆ. ಇದಕ್ಕಾಗಿ ಹೊಸ ಸ್ಥಾನಮಾನವನ್ನು ನೀಡುತ್ತೇವೆ. ಇದರ ಬಗ್ಗೆ ಯಾವುದೇ ಸಂದೇಹವಿಲ್ಲ. ಏಕೆಂದರೆ, ನಮಗೆ ಈ ಒಪ್ಪಂದದಲ್ಲಿ ಸಂಪೂರ್ಣ ನಂಬಿಕೆ ಇದೆ ಮತ್ತು ಕಳೆದ ಎಂಟು ವರ್ಷಗಳಿಂದ ನಾವು ಹಾಗೆ ಮಾಡುತ್ತಿದ್ದೇವೆ' ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಹೇಳಿದ್ದಾರೆ.

'ಪ್ರತಿ ವರ್ಷ ವಿಭಿನ್ನ ವಿಷಯಗಳಲ್ಲಿ ಕೆಲಸ ಮಾಡುವ ಮೂಲಕ ನಾವು ಅನೇಕ ಹೊಸ ಮಾರ್ಗಗಳನ್ನು ರೂಪಿಸಿದ್ದೇವೆ. ಉದಾಹರಣೆಗೆ... ಇಂಡೋ-ಪೆಸಿಫಿಕ್ ಪ್ರದೇಶವಾಗಲಿ ಅಥವಾ ತಂತ್ರಜ್ಞಾನವಾಗಲಿ, ಅಲ್ಲಿ ಯಾವುದೇ ಪ್ರಾಬಲ್ಯವಿಲ್ಲ. ನಾವು ಕಾನೂನಿನ ನಿಯಮವನ್ನು ದೃಢವಾಗಿ ನಂಬುತ್ತೇವೆ ಮತ್ತು ಕಳೆದ ಕೆಲವು ವರ್ಷಗಳಿಂದ ನಾವು ಇದನ್ನು ಪ್ರದರ್ಶಿಸಿದ್ದೇವೆ. ನಾವು ಜಂಟಿಯಾಗಿ ಪ್ರಾರಂಭಿಸಿದ ಐಎಂಇಸಿ ಯೋಜನೆ ಆಗಿರಲಿ, ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿರುವುದಾಗಲಿ, ಅಂತರರಾಷ್ಟ್ರೀಯ ಸೌರ ಒಕ್ಕೂಟವಾಗಲಿ ಕಳೆದ ಎಂಟು ವರ್ಷಗಳಲ್ಲಿ ನಾವು ಹಲವಾರು ಉಪಕ್ರಮಗಳನ್ನು ಒಟ್ಟಿಗೆ ತೆಗೆದುಕೊಂಡಿದ್ದೇವೆ' ಎಂದು ಮ್ಯಾಕ್ರನ್ ವಿವರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries