HEALTH TIPS

JEE-Main Results: ಗರಿಷ್ಠ 100 ಅಂಕ ಪಡೆದ 12 ವಿದ್ಯಾರ್ಥಿಗಳು

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೆಇಇ ಮೇನ್‌ 2026ರ ಮೊದಲ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು, 12 ವಿದ್ಯಾರ್ಥಿಗಳು ಗರಿಷ್ಠ 100 ಅಂಕಗಳನ್ನು ಗಳಿಸಿದ್ದಾರೆ.

ಮೊದಲ ಆವೃತ್ತಿಯಲ್ಲಿ 13.04 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇವರ ಫಲಿತಾಂಶ ಪ್ರಕಟಗೊಂಡಿದೆ.

ವಿದ್ಯಾರ್ಥಿಗಳಿಂದ ಪ್ರಶ್ನೆಗಳು ಎದುರಾಗುತ್ತಿದ್ದಂತೆ ಪರೀಕ್ಷೆಯಲ್ಲಿ ಒಂಬತ್ತು ಪ್ರಶ್ನೆಗಳಲ್ಲಿನ ಗೊಂದಲದಿಂದಾಗಿ 9 ಪ್ರಶ್ನೆಗಳನ್ನು ಕೈಬಿಡಲಾಗಿತ್ತು. ಈ ಪ್ರಶ್ನೆಗಳನ್ನು ಎದುರಿಸಿದವರಿಗೆ ಪೂರ್ಣ ಅಂಕಗಳನ್ನು ನೀಡಲಾಗಿದೆ. ಕಳೆದ ವರ್ಷ ಆರು ಪ್ರಶ್ನೆಗಳನ್ನು ಕೈಬಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಗರಿಷ್ಠ 100 ಅಂಕಗಳನ್ನು ಪಡೆದವರಲ್ಲಿ ಮೂವರು ರಾಜಸ್ಥಾನದವರು. ಆಂಧ್ರ ಪ್ರದೇಶದ ಇಬ್ಬರು, ದೆಹಲಿ, ಬಿಹಾರ, ಒಡಿಶಾ, ಮಹಾರಾಷ್ಟ್ರ, ಗುಜರಾತ್ ಹಾಗೂ ತೆಲಂಗಾಣದ ತಲಾ ಒಬ್ಬರು ಸೇರಿದ್ದಾರೆ. ಎಲ್ಲರೂ ಬಾಲಕರಾಗಿದ್ದು, ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ.

ರಾಜಸ್ಥಾನದ ಕಬೀರ್ ಚಿಲ್ಲರ್, ಚರಂಜೀವಿ ಕರ್‌, ಅರ್ನವ್ ಗೌತಮ್‌, ಆಂಧ್ರ ಪ್ರದೇಶದ ನರೇಂದ್ರಬಾಬು ಗರಿ ಮಹಿತ್ ಮತ್ತು ಪಸಾಲ ಮೋಹಿತ್. ದೆಹಲಿಯ ಶ್ರೇಯಸ್ ಮಿಶ್ರಾ, ಬಿಹಾರದ ಶುಭಂ ಕುಮಾರ್, ಒಡಿಶಾದ ಭವೇಶ್ ಪಾತ್ರಾ, ಹರಿಯಾಣದ ಅನಯ್ ಜೈನ್‌, ಮಹಾರಾಷ್ಟ್ರದ ಮಹಾದೇವ ವಿರಾದಿಯಾ, ಗುಜರಾತ್‌ನ ಪುರೋಹಿತ್ ನಿಮಯ್‌ ಮತ್ತು ತೆಲಂಗಾಣದ ವಿವಾನ್ ಶರದ್ ಮಹೀಶ್ವರಿ.

ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ಆಧಾರ್‌ ಆಧರಿಸಿ ಒಟಿಪಿ ಮಾದರಿಯ ಇ-ಕೆವೈಸಿ ದಾಖಲಿಸಲಾಗಿತ್ತು. ಇದರಿಂದ ನಕಲು ಆಗುವುದನ್ನು ತಡೆಯುವುದು ಹಾಗೂ ನೈಜ ಅಭ್ಯರ್ಥಿಯೇ ಪರೀಕ್ಷೆ ಎದುರಿಸುವಂತೆ ಎನ್‌ಟಿಎ ಯೋಜನೆ ರೂಪಿಸಿತ್ತು. ಸಿಸಿಟಿವಿ ಕಣ್ಗಾವಲು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ವಿಡಿಯೊ ಅನಲಿಟಿಕ್ಸ್ ಕೂಡಾ ಈ ಬಾರಿ ಜಾರಿಗೆ ತರಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries