ಇಂದಿನ ಡಿಜಿಟಲ್ ಜೀವನದಲ್ಲಿ ಸ್ಮಾರ್ಟ್‌ಫೋನ್ ನಮ್ಮ ದಿನನಿತ್ಯದ ಸಂಗಾತಿ. ಆದರೆ ನಾಲ್ಕು ಐದು ಗಂಟೆಯಕೂ ಮುಂಚೆ ಬ್ಯಾಟರಿ ಖಾಲಿಯಾಗುವುದು, ಡೇಟಾ ಸೋರಿಕೆ ಅಥವಾ ಅಪಾಯಕಾರಿ ಪಬ್ಲಿಕ್ ವೈ-ಫೈಗೆ ಫೋನ್ ಸಂಪರ್ಕಗೊಳ್ಳುವುದು ಸಾಮಾನ್ಯ ಸಮಸ್ಯೆಗಳಾಗಿವೆ. ಇವುಗಳನ್ನು ತಪ್ಪಿಸಲು ಮನೆಯಿಂದ ಹೊರಡುವ ಮೊದಲು ಕೇವಲ ಒಂದು ಸೆಟ್ಟಿಂಗ್ ಅನ್ನು ಆಫ್ ಮಾಡುವುದರಿಂದ ಅಪಾರ ಪ್ರಯೋಜನ ನೀಡುತ್ತದೆ: ಅದು ನಿಮ್ಮ ಫೋನ್‌ನ ವೈ-ಫೈ ಸೆಟ್ಟಿಂಗ್..!
ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಡುವಾಗ ನಾವೆಲ್ಲರೂ ಫೋನ್ ಚಾರ್ಜ್ ಚೆನ್ನಾಗಿದೆಯೇ ಎಂದು ಒಮ್ಮೆ ನೋಡುತ್ತೇವೆ. ಆದರೆ ಕೆಲವೊಮ್ಮೆ ಸಂಜೆಯೇ ಫೋನ್ ಸಂಪೂರ್ಣ ಖಾಲಿಯಾಗಿ ನಮ್ಮನ್ನು ತೊಂದರೆಗೊಳಪಡಿಸುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಫೋನ್‌ನಲ್ಲಿ ಯಾವಾಗಲೂ ಆನ್ ಇರುವ ಒಂದು ಸಣ್ಣ ಸೆಟ್ಟಿಂಗ್. ಮನೆಯಿಂದ ಹೊರಡುವ ಮೊದಲು ವೈಫೈ ಆಫ್ ಮಾಡುವುದನ್ನು ಹಲವರು ಮರೆಯುತ್ತಾರೆ. ಇದನ್ನು ಆಫ್ ಮಾಡಿದರೆ ಬ್ಯಾಟರಿ ಉಳಿತಾಯವಾಗುವುದಲ್ಲದೆ ನಿಮ್ಮ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯೂ ಹೆಚ್ಚಾಗುತ್ತದೆ. ಬನ್ನಿ, ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ವೈಫೈ ಆನ್ ಇದ್ದರೆ ಬ್ಯಾಟರಿ ಯಾಕೆ ಬೇಗ ಖಾಲಿಯಾಗುತ್ತದೆ?: ನೀವು ಮನೆಯಲ್ಲಿ ಇದ್ದಾಗ ವೈಫೈ ಆನ್ ಮಾಡಿಟ್ಟರೆ ಯಾವ ಸಮಸ್ಯೆಯೂ ಇಲ್ಲ. ಆದರೆ ಮನೆಯಿಂದ ಹೊರಡುವ ತಕ್ಷಣ ಫೋನ್ ನಿರಂತರವಾಗಿ ಹೊಸ ವೈಫೈ ನೆಟ್‌ವರ್ಕ್‌ಗಳನ್ನು ಹುಡುಕುತ್ತಲೇ ಇರುತ್ತದೆ. ರಸ್ತೆಯಲ್ಲಿ, ಬಸ್‌ನಲ್ಲಿ, ಆಫೀಸ್‌ಗೆ ಹೋಗುವ ದಾರಿಯಲ್ಲಿ ಎಲ್ಲೆಡೆ ಫೋನ್ ಸಿಗ್ನಲ್‌ಗಳನ್ನು ಸ್ಕ್ಯಾನ್ ಮಾಡುತ್ತಿರುತ್ತದೆ. ಈ ಪ್ರಕ್ರಿಯೆಗೆ ಬ್ಯಾಟರಿ ತುಂಬಾ ಬೇಗ ಖರ್ಚಾಗುತ್ತದೆ. ಹೊರಗೆ ಹೋದಾಗ ವೈಫೈ ಆಫ್ ಮಾಡಿದರೆ ಫೋನ್ ಇಡೀ ದಿನ ಸುಲಭವಾಗಿ ಚಾರ್ಜ್ ಉಳಿಸಿಕೊಳ್ಳುತ್ತದೆ.
ಸಾರ್ವಜನಿಕ ವೈಫೈಯ ಎಷ್ಟು ದೊಡ್ಡ ಅಪಾಯ?: ಕೆಫೆ, ರೈಲ್ವೆ ನಿಲ್ದಾಣ, ಏರ್‌ಪೋರ್ಟ್, ಶಾಪಿಂಗ್ ಮಾಲ್‌ಗಳಲ್ಲಿ ಸಿಗುವ ಉಚಿತ ವೈಫೈ ತುಂಬಾ ಆಕರ್ಷಣೀಯವಾಗಿರುತ್ತದೆ. ಆದರೆ ಇದರ ಹಿಂದೆ ದೊಡ್ಡ ಅಪಾಯವಿದೆ. ಹ್ಯಾಕರ್‌ಗಳು ನಕಲಿ ವೈಫೈ ಹಾಟ್‌ಸ್ಪಾಟ್ ರಚಿಸಿ ನಿಮ್ಮ ಫೋನ್ ಸ್ವಯಂಚಾಲಿತವಾಗಿ ಕನೆಕ್ಟ್ ಆದಾಗ ಬ್ಯಾಂಕ್ ವಿವರ, ಪಾಸ್‌ವರ್ಡ್, ಫೋಟೋ, ಮೆಸೇಜ್ ಎಲ್ಲವನ್ನೂ ಕದಿಯಬಹುದು. ವೈಫೈ ಆನ್ ಇದ್ದರೆ ಫೋನ್ ಆಟೋ ಕನೆಕ್ಟ್ ಆಗುವ ಸಾಧ್ಯತೆ ಹೆಚ್ಚು. ಹೊರಗೆ ಹೋದಾಗ ಆಫ್ ಮಾಡಿದರೆ ಈ ಅಪಾಯ ಸಂಪೂರ್ಣ ತಪ್ಪುತ್ತದೆ.
ನಿಮ್ಮ ಗೌಪ್ಯತೆಗೂ ಬೆದರಿಕೆ: ನಿಮ್ಮ ಫೋನ್ ಎಲ್ಲಿಯೆಲ್ಲಿಗೆ ಕನೆಕ್ಟ್ ಆಗಿದೆ ಎಂಬ ಎಲ್ಲಾ ವೈಫೈ ನೆಟ್‌ವರ್ಕ್‌ಗಳ ಪಟ್ಟಿ ಸಂಗ್ರಹಿಸುತ್ತದೆ. ಗೂಗಲ್, ಆಪಲ್, ಮೈಕ್ರೋಸಾಫ್ಟ್ ಇವೆಲ್ಲವೂ ಈ ಮಾಹಿತಿಯನ್ನು ನಿಮ್ಮ ಸ್ಥಳ ಟ್ರ್ಯಾಕ್ ಮಾಡಲು ಬಳಸುತ್ತವೆ. ಹ್ಯಾಕರ್ ಈ ಪಟ್ಟಿ ಪಡೆದರೆ ನೀವು ಎಲ್ಲಿರುವಿರಿ, ಎಲ್ಲಿ ವಾಸಿಸುತ್ತಿರಿ ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ಹೊರಗೆ ವೈಫೈ ಆಫ್ ಮಾಡುವುದರಿಂದ ಹೊಸ ನೆಟ್‌ವರ್ಕ್ ಪಟ್ಟಿ ರಚನೆಯಾಗುವುದಿಲ್ಲ. ನಿಮ್ಮ ಗೌಪ್ಯತೆ ಸುರಕ್ಷಿತವಾಗಿರುತ್ತದೆ.
ಆಂಡ್ರಾಯ್ಡ್ ಫೋನ್‌ಗಳಲ್ಲೂ ಸುಲಭ ಆಯ್ಕೆಗಳು: ಹಲವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ ವೈಫೈ ಸೆಕ್ಷನ್‌ನಲ್ಲಿ ಸ್ಮಾರ್ಟ್ ವೈಫೈ ಅಥವಾ ಆಟೋ ಆಫ್ ಆಯ್ಕೆ ಇರುತ್ತದೆ. ಇದನ್ನು ಆನ್ ಮಾಡಿದರೆ ಮನೆ ಅಥವಾ ಆಫೀಸ್‌ನಂತಹ ಪರಿಚಿತ ಸ್ಥಳಗಳಲ್ಲಿ ಮಾತ್ರ ವೈಫೈ ಆನ್ ಇರುತ್ತದೆ. ಹೊರಗೆ ಹೋದ ತಕ್ಷಣ ಆಟೋಮ್ಯಾಟಿಕ್ ಆಫ್ ಆಗುತ್ತದೆ. ಸ್ಯಾಮ್‌ಸಂಗ್, ಶಾವೋಮಿ, ಒನ್‌ಪ್ಲಸ್, ರಿಯಲ್‌ಮಿ ಫೋನ್‌ಗಳಲ್ಲಿ ಈ ಫೀಚರ್ ಸುಲಭವಾಗಿ ಸಿಗುತ್ತದೆ.
ಇನ್ನೊಂದು ಸಣ್ಣ ಟಿಪ್: ಹೊರಗೆ ಹೋಗುವಾಗ ಬ್ಲೂಟೂತ್ ಕೂಡ ಆಫ್ ಮಾಡಿ. ಅದೂ ಸಣ್ಣ ಪ್ರಮಾಣದಲ್ಲಿ ಬ್ಯಾಟರಿ ತಿನ್ನುತ್ತದೆ ಮತ್ತು ಅನಗತ್ಯ ಸಾಧನಗಳಿಗೆ ಕನೆಕ್ಟ್ ಆಗುವ ಅಪಾಯವಿರುತ್ತದೆ.
ಅದರಂತೆ, ಈ ಸಣ್ಣ ಬದಲಾವಣೆಯಿಂದ ನಿಮ್ಮ ಫೋನ್ ಬ್ಯಾಟರಿ ಇಡೀ ದಿನ ಇರುತ್ತದೆ. ಡೇಟಾ ಸುರಕ್ಷಿತವಾಗಿರುತ್ತದೆ, ಗೌಪ್ಯತೆಯೂ ಕಾಪಾಡಲ್ಪಡುತ್ತದೆ. ಮುಂದಿನ ಬಾರಿ ಮನೆಯಿಂದ ಹೊರಡುವ ಮೊದಲು ವೈಫೈ ಆಫ್ ಮಾಡಲು ಮರೆಯದಿರಿ!



