HEALTH TIPS

ಗಾಝಾದಲ್ಲಿ ಇಸ್ರೇಲ್ ಕ್ರಮಗಳಿಂದ ಜನಾಂಗೀಯ ನಿರ್ಮೂಲನೆ ಭಯ ಹೆಚ್ಚಿದೆ: ವಿಶ್ವಸಂಸ್ಥೆ ಕಳವಳ

ಜಿನೆವಾ: ಇಸ್ರೇಲ್‍ನ ಹೆಚ್ಚುತ್ತಿರುವ ದಾಳಿಗಳು ಮತ್ತು ಫೆಲೆಸ್ತೀನೀಯರ ಬಲವಂತದ ಸ್ಥಳಾಂತರಗಳು ಗಾಝಾ ಪಟ್ಟಿ ಮತ್ತು ಪಶ್ಚಿಮದಂಡೆಯಲ್ಲಿ ಜನಾಂಗೀಯ ನಿರ್ಮೂಲನೆಯ' ಬಗ್ಗೆ ಕಳವಳವನ್ನು ಹೆಚ್ಚಿಸಿದೆ ಎಂದು ಗುರುವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ವಿಶ್ವಸಂಸ್ಥೆ ಹೇಳಿದೆ.

ಗಾಝಾದಲ್ಲಿನ ಯುದ್ದದ ಸಮಯದಲ್ಲಿ ಇಸ್ರೇಲ್‍ನ ಮಿಲಿಟರಿ ನಡವಳಿಕೆಯ ಸಂಚಿತ ಪರಿಣಾಮ, ಜೊತೆಗೆ ಭೂಪ್ರದೇಶದ ಮೇಲೆ ಅದರ ದಿಗ್ಬಂಧನವು ಗಾಝಾದಲ್ಲಿ ಫೆಲೆಸ್ತೀನೀಯರ ಜೀವನ ಪರಿಸ್ಥಿತಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ತೀವ್ರವಾದ ದಾಳಿಗಳು, ಸಂಪೂರ್ಣ ನೆರೆಹೊರೆಗಳ ಕ್ರಮಬದ್ಧ ನಾಶ ಮತ್ತು ಮಾನವೀಯ ನೆರವಿನ ನಿರಾಕರಣೆಯು ಗಾಝಾದಲ್ಲಿ ಶಾಶ್ವತ ಜನಸಂಖ್ಯಾ ಬದಲಾವಣೆಯ ಗುರಿಯನ್ನು ಹೊಂದಿದೆ. ಇದು ಬಲವಂತದ ವರ್ಗಾವಣೆಯೊಂದಿಗೆ ಶಾಶ್ವತ ಸ್ಥಳಾಂತರದ ಉದ್ದೇಶವನ್ನು ತೋರುತ್ತದೆ ಮತ್ತು ಗಾಝಾ ಹಾಗೂ ಪಶ್ಚಿಮದಂಡೆಯಲ್ಲಿ ಜನಾಂಗೀಯ ನಿರ್ಮೂಲನೆಯ ಆತಂಕವನ್ನು ಹೆಚ್ಚಿಸಿದೆ ಎಂದು ವರದಿ ಹೇಳಿದೆ. 2024ರ ನವೆಂಬರ್ 1ರಿಂದ 2025ರ ಅಕ್ಟೋಬರ್ 31ರವರೆಗಿನ ಅವಧಿಗೆ ಸಂಬಂಧಿಸಿದ ವರದಿ ಇದಾಗಿದೆ.

ಆಕ್ರಮಿತ ಪಶ್ಚಿಮದಂಡೆ ಮತ್ತು ಸ್ವಾಧೀನಪಡಿಸಿಕೊಂಡ ಪೂರ್ವ ಜೆರುಸಲೇಂನಲ್ಲಿ ಇಸ್ರೇಲಿ ಪಡೆಗಳಿಂದ ಕಾನೂನುಬಾಹಿರ ಬಲದ ವ್ಯವಸ್ಥಿತ ಬಳಕೆ, ವ್ಯಾಪಕವಾದ ಅನಿಯಂತ್ರಿತ ಬಂಧನ ಮತ್ತು ಫೆಲೆಸ್ತೀನೀಯರ ಮನೆಗಳನ್ನು ಕಾನೂನುಬಾಹಿರವಾಗಿ ನೆಲಸಮಗೊಳಿಸುವ ಕ್ರಮಗಳನ್ನು ಫೆಲೆಸ್ತೀನಿಯನ್ ಜನರ ಮೇಲೆ ದಬ್ಬಾಳಿಕೆಗೆ ಹಾಗೂ ಪ್ರಾಬಲ್ಯ ಸಾಧಿಸಲು ನಡೆಸಲಾಗಿದೆ. ಈ ಉಲ್ಲಂಘನೆಗಳು ಆಕ್ರಮಿತ ಪಶ್ಚಿಮದಂಡೆಯ ಪಾತ್ರ, ಸ್ಥಿತಿ ಮತ್ತು ಜನಸಂಖ್ಯಾ ಸಂಯೋಜನೆಯನ್ನು ಬದಲಾಯಿಸುತ್ತಿವೆ ಹಾಗೂ ಜನಾಂಗೀಯ ನಿರ್ಮೂಲನೆಯ ಗಂಭೀರ ಕಾಳಜಿಯನ್ನು ಹೆಚ್ಚಿಸಿದೆ ಎಂದು ವರದಿ ಹೇಳಿದೆ. ಗಾಝಾದಲ್ಲಿ ಅಪಾರ ಪ್ರಮಾಣದಲ್ಲಿ ನಾಗರಿಕರ ನಿರಂತರ ಹತ್ಯೆ, ಕ್ಷಾಮದ ಹರಡುವಿಕೆ ಮತ್ತು ಉಳಿದಿರುವ ನಾಗರಿಕ ಮೂಲಸೌಕರ್ಯಗಳ ನಾಶವನ್ನು ವರದಿ ಖಂಡಿಸಿದ್ದು 12 ತಿಂಗಳ ಅವಧಿಯಲ್ಲಿ 157 ಮಕ್ಕಳು ಸೇರಿದಂತೆ ಕನಿಷ್ಠ 463 ಫೆಲೆಸ್ತೀನೀಯರು ಹಸಿವಿನಿಂದ ಮೃತಪಟ್ಟಿದ್ದಾರೆ. ಉಪವಾಸದಿಂದ ಸಾಯುವುದು ಅಥವಾ ಆಹಾರ ಪಡೆಯಲು ಪ್ರಯತ್ನಿಸುವಾಗ ಹತರಾಗುವ ಅಪಾಯಕ್ಕೆ ಒಡ್ಡಿಕೊಳ್ಳುವ ಅಮಾನವೀಯ ಆಯ್ಕೆಯನ್ನು ಫೆಲೆಸ್ತೀನೀಯರು ಎದುರಿಸುತ್ತಿದ್ದಾರೆ. ಕ್ಷಾಮ ಮತ್ತು ಅಪೌಷ್ಟಿಕತೆಯ ಪರಿಸ್ಥಿತಿಯು ಇಸ್ರೇಲ್ ಸರಕಾರ ಕೈಗೊಂಡ ಕ್ರಮಗಳ ನೇರ ಫಲಿತಾಂಶವಾಗಿದೆ ಎಂದು ವರದಿ ಹೇಳಿದೆ.

ವರದಿ ಮಾಡಿದ ಅವಧಿಯಲ್ಲಿ ಹಮಾಸ್ ಹಾಗೂ ಇತರ ಸಶಸ್ತ್ರ ಗುಂಪುಗಳು ಒತ್ತೆಯಾಳುಗಳನ್ನು `ಚೌಕಾಶಿ ಸಾಧನಗಳಾಗಿ' ಬಳಸಿಕೊಂಡವು. ಒತ್ತೆಯಾಳುಗಳನ್ನು ನಡೆಸಿಕೊಂಡ ರೀತಿ ಯುದ್ದಾಪರಾಧಕ್ಕೆ ಸಮವಾಗಿದೆ. ಇಸ್ರೇಲ್‌ ಪಡೆಗಳು, ಹಮಾಸ್ ಹಾಗೂ ಇತರ ಫೆಲೆಸ್ತೀನಿಯನ್ ಸಶಸ್ತ್ರ ಗುಂಪುಗಳು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನಿಯಮಗಳ ಸಂಪೂರ್ಣ ಉಲ್ಲಂಘನೆ ಮತ್ತು ದುರುಪಯೋಗ ಮಾಡಿಕೊಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries