ಪೆರ್ಲ : ಮಣಿಯಂಪಾರೆ ದುರ್ಗಾನಗರದ ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಕಾರ್ಯಾಲಯ ಉದ್ಘಾಟನೆಗೊಂಡಿತು. ಮುಗು ಶ್ರೀಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರನಾಥ ನಾಯಕ್ ಕಚೇರಿಯನ್ನು ಉದ್ಘಾಟಿಸಿದರು. ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಂಞಣ್ಣ ಮಾಸ್ತರ್ ನೆಕ್ಕರೆಪದವು ಅಧ್ಯಕ್ಷತೆ ವಹಿಸಿದ್ದರು.
ಮಂದಿರದ ಸ್ಥಾಪಕ ಸದಸ್ಯ ಗೋವಿಂದ ನಾಯ್ಕ ಅರೆಮಂಗಿಲ, ಉದ್ಯಮಿ ಚನಿಯಪ್ಪ ಪೂಜಾರಿ ಮಣಿಯಂಪಾರೆ, ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ಅನಂದ ಅರೆಮಂಗಿಲ, ಕಾರ್ಯದರ್ಶಿ ಸಂಕಪ್ಪ ಸುವರ್ಣ ಬಾಡೂರು, ಕೃಷ್ಣಪ್ಪ ನಾಯ್ಕ ಅರೆಮಂಗಿಲ ಮೊದಲಾದವರು ಭಾಗವಹಿಸಿದ್ದರು.

.jpg)
