HEALTH TIPS

ಬ್ರಿಟನ್‌ಗೆ ಮೊದಲ ಮುಸ್ಲಿಂ ಪ್ರಧಾನಿ?; ಕೀರ್ ಸ್ಟಾರ್ಮರ್- ಎಪ್ಸ್ಟೀನ್ ಹಗರಣದ ಮಧ್ಯೆ ಮುನ್ನೆಲೆಯಲ್ಲಿ ಶಬಾನಾ ಮಹಮೂದ್

ಬ್ರಿಟನ್: ಅಮೆರಿಕಕ್ಕೆ ಬ್ರಿಟಿಷ್ ರಾಯಭಾರಿಯಾಗಿದ್ದ ಪೀಟರ್ ಮ್ಯಾಂಡೆಲ್ಸನ್ ಅವರನ್ನು ನೇಮಕ ಮಾಡಿ ನಂತರ ತೆಗೆದುಹಾಕುವ ನಿರ್ಧಾರದ ವಿವಾದದ ನಂತರ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ ನೀಡುವಂತೆ ಹೆಚ್ಚಿನ ಒತ್ತಡ ಎದುರಿಸುತ್ತಿದ್ದಾರೆ. ಈ ಮಧ್ಯೆ ಬರ್ಮಿಂಗ್ಹ್ಯಾಮ್ ಲೇಡಿಯುಡ್‌ನ ಸಂಸದೆಯಾಗಿರುವ ಶಬಾನಾ ಮಹಮೂದ್ ಅವರ ಹೆಸರು ಬ್ರಿಟನ್‌ ಪ್ರಧಾನಿ ಹುದ್ದೆಗೆ ಕೇಳಿ ಬಂದಿದೆ..

ಪೀಟರ್ ಮ್ಯಾಂಡೆಲ್ಸನ್, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಹೊಂದಿದ್ದ ಎಂಬ ಆರೋಪವು ವಿವಾದಕ್ಕೆ ಕಾರಣವಾಗಿತ್ತು. ಸ್ಟಾರ್ಮರ್ ರಾಜೀನಾಮೆ ನೀಡುವಂತೆ ಒತ್ತಡ ಎದುರಿಸುತ್ತಿರುವ ಮಧ್ಯೆ ಅವರ ಆಪ್ತ ಸಹಾಯಕ ಮಾರ್ಗನ್ ಮೆಕ್ಸ್ವೀನಿ ರಾಜೀನಾಮೆ ನೀಡಿದ್ದಾರೆ. ಅವರು ಮ್ಯಾಂಡೆಲ್ಸನ್ ಅವರ ನೇಮಕಾತಿಯಲ್ಲಿ ತಮ್ಮ ಪಾತ್ರಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬ್ರಿಟನ್‌ ಪ್ರಧಾನಮಂತ್ರಿಯವರ ಸಂವಹನ ವಿಭಾಗದ ಮುಖ್ಯಸ್ಥ ಟಿಮ್ ಆಲನ್ ಕೂಡ ಹುದ್ದೆ ತೊರೆದಿದ್ದಾರೆ.

ಇದರಿಂದ ಬ್ರಿಟನ್‌ನಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಹೆಚ್ಚಳವಾಗಿದೆ. ಒಂದು ವೇಳೆ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಲ್ಲಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಮೂಡಿದೆ. ಯುಕೆ ಪ್ರಧಾನಿ ಹುದ್ದೆಗೆ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ.

ಶಬಾನಾ ಮಹಮೂದ್ ಅವರು ಬ್ರಿಟನ್ ಪ್ರಧಾನಿ ಹುದ್ದೆಗೆ ಏರಿದರೆ ಪಾಕಿಸ್ತಾನ ಮೂಲದ ಯುಕೆಯ ಮೊದಲ ಪ್ರಧಾನಿಯಾಗಿ ಮತ್ತು ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಮುಸ್ಲಿಂ ಮಹಿಳೆಯಾಗಿ ಇತಿಹಾಸ ನಿರ್ಮಾಣವಾಗಲಿದೆ.

ಶಬಾನಾ ಮಹಮೂದ್ ಯಾರು?

2010 ರಿಂದ ಬರ್ಮಿಂಗ್ಹ್ಯಾಮ್ ಲೇಡಿಯುಡ್‌ನ ಸಂಸದೆಯಾಗಿರುವ ಶಬಾನಾ ಮಹಮೂದ್ ಅವರು ಲೇಬರ್ ಪಕ್ಷದ ಅತ್ಯಂತ ಸಮರ್ಥ ಮತ್ತು ಪ್ರಭಾವಿ ನಾಯಕರಲ್ಲಿ ಓರ್ವರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.

ವೃತ್ತಿಯಿಂದ ಬ್ಯಾರಿಸ್ಟರ್ ಆಗಿರುವ ಅವರು, 2010ರಲ್ಲಿ ಸಂಸತ್ತಿಗೆ ಪ್ರವೇಶಿಸಿದ ಲೇಬರ್ ಪಕ್ಷದ ಮೊದಲ ಮುಸ್ಲಿಂ ಮಹಿಳಾ ಸಂಸದರಲ್ಲಿ ಒಬ್ಬರಾಗಿದ್ದರು. ಮೊದಲ ಬಾರಿಯೇ ಶಾಡೋ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದು ಪಕ್ಷದೊಳಗೆ ತಮ್ಮದೇ ಪ್ರಾಬಲ್ಯವನ್ನು ಹೊಂದಿದ್ದಾರೆ.

ಲೇಬರ್ ಪಕ್ಷ ಅಧಿಕಾರಕ್ಕೆ ಮರಳಿದ ನಂತರ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡ ಮಹಮೂದ್, ಸರಕಾರದಲ್ಲಿ ಅತ್ಯಂತ ಪ್ರಭಾವಿ ಖಾತೆಯನ್ನು ಹೊಂದಿದ್ದಾರೆ. ಪೊಲೀಸ್, ರಾಷ್ಟ್ರೀಯ ಭದ್ರತೆ, ವಲಸೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಶಬಾನಾ ಮಹಮೂದ್ ಅವರು ಬ್ರಿಟಿಷ್ ಮುಸ್ಲಿಂ ಗುರುತು, ಕಾರ್ಮಿಕ ವರ್ಗ ಮತ್ತು ತಮ್ಮ ರಾಜಕೀಯ ಪ್ರಯಾಣವನ್ನು ರೂಪಿಸುವಲ್ಲಿ ಶಿಕ್ಷಣ ವಹಿಸಿದ ಪಾತ್ರದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries