HEALTH TIPS

ಪೈವಳಿಕೆ ಪಂಚಾಯತ್ ವಸತಿ ಯೋಜನೆ: ಸಿಪಿಎಂ ನಡೆಸಿದ ಮಾರ್ಚ್ ಕಪಟ ನಾಟಕ-ಯುಡಿಎಫ್

ಉಪ್ಪಳ: ಪೈವಳಿಕೆ ಪಂಚಾಯತ್‌ನ ಲೈಫ್ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ಪಾವತಿಸಲಾಗಿಲ್ಲ ಎಂಬ ಕಾರಣಕ್ಕೆ ಸಿಪಿಎಂ ನಡೆಸಿದ ಮಾರ್ಚ್ ಹಾಗೂ ಧರಣಿ ಕಪಟ ನಾಟಕವೆಂದು ಪೈವಳಿಕೆ ಪಂಚಾಯತ್ ಯುಡಿಎಫ್ ಸಮಿತಿ ಅಧ್ಯಕ್ಷ ವಸಂತ ಕುಮಾರ್, ಸಂಚಾಲಕ ಝಡ್.ಎ. ಕಯ್ಯಾರ್ ಆರೋಪಿಸಿದ್ದಾರೆ.  ತಮ್ಮದೇ ಸರಕಾರದ ವಿರುದ್ಧ ಸಿಪಿಎಂ ಮುಷ್ಕರ ನಡೆಸಿದಂತಾಗಿದೆ ಇದು ಎಂದು ಯುಡಿಎಫ್ ಮುಖಂಡರು ತಿಳಿಸಿದ್ದಾರೆ. 


ಲೈಫ್ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಆರ್ಥಿಕ ಸಹಾಯ ಒದಗಿಸಲು ಹಿಂದಿನ ಆಡಳಿತ ಸಮಿತಿಗೆ ಸಾಧ್ಯವಾಗದ ಕಾರಣ ರಾಜ್ಯ ಸರಕಾರ ಈ ಯೋಜನೆಯ ಮೊತ್ತ ಬಿಡುಗಡೆ ಮಾಡಲು ವಿಳಂಬವಾಗಿದೆ. ಕೇವಲ ತಿಂಗಳ ಹಿಂದೆ ಅಧಿಕಾರಕ್ಕೇರಿದ ಈಗಿನ ಆಡಳಿತ ಸಮಿತಿಗೆ ಎದುರಾಗಿ ಈ ವಿಷಯದಲ್ಲಿ ಅಪ ಪ್ರಚಾರ ನಡೆಸುತ್ತಿರುವ ಸಿಪಿಎಂ ತಮ್ಮ ತಪ್ಪಿನ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಸೂಕ್ತ ಎಂದು, ಈ ಬಗ್ಗೆ ಸಾರ್ವಜನಿಕರು ಅರ್ಥಮಾಡಿಕೊಳ್ಳುವರು ಎಂದು ಯುಡಿಎಫ್ ಮುಖಂಡರು

 ತಿಳಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries