ಮಂಜೇಶ್ವರ: ಮಾರ್ಚ್ 8 ರಂದು ಎಸ್.ಎ.ಟಿ ಶಾಲಾ ಮೈದಾನದಲ್ಲಿ ಜರಗಲಿರುವ ಮಂಜೇಶ್ವರ ಪಂಚಾಯತಿ ಮಟ್ಟದ ಬೃಹತ್ ಹಿಂದೂ ಸಂಗಮದ ಆಮಂತ್ರಣ ಪತ್ರಿಕೆ ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮ ಬಡಾಜೆಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರ ನಿವಾಸದಲ್ಲಿ ಬುಧವಾರ ಜರಗಿತು.
ಹಿಂದೂ ಸಂಗಮ ಸ್ವಾಗತ ಸಮಿತಿ ಅಧ್ಯಕ್ಷ ಮೋಹನ ಶೆಟ್ಟಿ ತೂಮಿನಾಡು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಮಂತ್ರಣ ಪತ್ರಿಕೆ ಹಾಗೂ ಲಾಂಛನ ಬಿಡುಗಡೆಗೊಳಿಸಿ ಮಾರ್ಗದರ್ಶನ ನೀಡಿದ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರು ಸಂಘರ್ಷ- ಸವಾಲುಗಳ ಮಧ್ಯೆಯೂ ಹಿಂದೂ ಧರ್ಮ ಇಂದಿಗೂ ಅವಿನಾಶಿನಿಯಾಗಿ ತಲೆಯೆತ್ತಿ ನಿಂತಿದೆ. ಹಿಂದು ಸಮಾಜ ವಿಘಟಿತವಾದಾಗಲೆಲ್ಲ ಮತ್ತೆ ಮೈಕೊಡವಿ ನಿಂತಿದೆ. ಧರ್ಮಸಂರಕ್ಷಣೆಗೆ ಸಂಘಟಿತ ಹಿಂದೂ ಸಮಾಜ ಈ ಕಾಲಘಟ್ಟದ ಅನಿವಾರ್ಯತೆಯಾಗಿದೆ ಎಂದರು.
ಹಿಂದೂ ಸಂಗಮ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ನಿವೃತ್ತ ನೌಕಾದಳ ಕಮಾಂಡರ್ ವಿಜಯ ಕುಮಾರ್ ಕಣ್ವತೀರ್ಥ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ಕಾರ್ಯದರ್ಶಿ ನವೀನ್ ಉದ್ಯಾವರ ವಂದಿಸಿದರು.

.jpg)
.jpg)
