HEALTH TIPS

ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಫೆ. 22ರಂದು ನಡೆಯಲಿರುವ 'ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026'ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಎಡನೀರು ಶ್ರೀ ಮಠದಲ್ಲಿ ಜರುಗಿತು.  

ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ  ಬಿಡುಗಡೆ ಗೊಳಿಸಿ ಆಶೀರ್ವಾದ ಮಂತ್ರಾಕ್ಷತೆ ನೀಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮದದ ಬಗ್ಗೆ ಮಾಹಿತಿ ನೀಡಿದರು.  ಉಪಾಧ್ಯಕ್ಷ ಶಂಕರ ಜೆ ಪಿ ನಗರ ಕಾರ್ಯಕ್ರಮ ನಿರೂಪಿಸಿದರು, ಗೌರವಾದ್ಯಕ್ಷ ಪ್ರದೀಪ್ ಬೇಕಲ್, ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಸ್ವಾಮಿಜಿಗಳಿಗೆ ಫಲ ಪುಷ್ಪ ಸಮರ್ಪಿಸಿದರು. ನಿರ್ದೇಶಕ ಜಗನ್ನಾಥ್ ಶೆಟ್ಟಿ ವಂದಿಸಿದರು.

ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಸರ್ವಾಧ್ಯಕ್ಷತೆಯಲ್ಲಿ, ಡಾ. ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಕನ್ನಡ ಭವನದ ಅಂಗ ಸಂಸ್ಥೆ "ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಅಂಗವಾಗಿ ಪರಿಷತ್ತಿನ ಜಿಲ್ಲಾ ಘಟಕಗಳ ಸಹಕಾರ ಹಾಗೂ ಕನ್ನಡ ಭವನ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. 

ಅಂದು ಬೆಳಿಗ್ಗೆ 7ರಿಂದ ಭಜನೆ. 8.30 ಗೆ ಸರ್ವಾಧ್ಯಕ್ಷರ ಮೆರವಣಿಗೆ, 9ಕ್ಕೆ ಸಮರಂಭದ ಉದ್ಘಾಟನೆ ನಡೆಯುವುದು. ಗದಗ ಗೋವಿನಾಳದ ಶ್ರೀ ರಮೇಶ ಗುರೂಜಿ,  ಹಾಗೂ ಎಡನೀರು  ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು.  ಈ ಸಂದರ್ಭ ಸ್ವಾಮಿಜಿಗಳಿಗೆ ವಿಶೇಷ ಸಮ್ಮೇಳನ ಗೌರವ ಪ್ರದಾನ ಮಾಡಲಾಗುವುದು.  ಮಹಾನ್ ಕವಿ ಸಾಹಿತಿಗಳಿಗೆ "ಕವಿ ಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ,. ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಸಾರ್ವಜನಿಕ ವಾಚನಾಲಯ ಲೋಕಾರ್ಪಣೆ, ಕವಿಗೋಷ್ಠಿ, ವಿಚಾರ ಸಂಕಿರಣ, ನೃತ್ಯ-ಗಾನ-ವೈಭವ, ಪರಿಷತ್ತಿನ ಕಾರ್ಯಕರ್ತ, ಕವಿಗಳಿಗೆ "ಕವಿರತ್ನ ಪ್ರಶಸ್ತಿ "ಕನ್ನಡ ಭವನ ಜಿಲ್ಲಾ ಘಟಕಗಳ ಪದಾಧಿಕಾರಿ ಕನ್ನಡ ಮುಖಂಡರಿಗೆ "ಕನ್ನಡ ಪಯಸ್ವಿನಿ ಪ್ರಶಸ್ತಿ, ಪುಸ್ತಕ ಬಿಡುಗಡೆ ನಡೆಯಲಿದೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries