ಕಾಸರಗೋಡು: ನಗರದ ಬೀರಂತಬೈಲು ಪುಷ್ಪಾ ಗಣಪತಿ ಆಚಾರ್ಯ ಅವರ ಮನೆಗೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಹಾನಿಯಾಗಿರುವ ಬಗ್ಗೆ ಸಹಾಯಧನ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳ ಪೂಜ್ಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಪೂಜ್ಯರು ಅವರ ಧನಸಹಾಯವನ್ನು ಕ್ಷೇತ್ರದ ವತಿಯಿಂದ ಪ್ರಸಾದ ರೂಪವಾಗಿ ಮಂಜೂರು ಗೊಳಿಸಿರುತ್ತಾರೆ.
ಮಂಜೂರಾತಿ ಪತ್ರವನ್ನು ಸಂತ್ರಸ್ತ ಮನೆಯವರಿಗೆ ಹಸ್ತಂತರಿಸಲಾಯಿತು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಯೋಜನಾಧಿಕಾರಿ ದಿನೇಶ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಕಾಸರಗೋಡು ನಗರಸಭಾ ಕೌನ್ಸಿಲರ್ ಹರೀಶ್ ಕೆ.ಆರ್, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗೋಪಾಲಕೃಷ್ಣ, ಸೇವಾಪ್ರತಿನಿಧಿ ಶೋಭಾ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.


