HEALTH TIPS

ತೇಜಸ್ ಜೆಟ್ ವಿಮಾನ ಅಪಘಾತಕ್ಕೆ ತಾಂತ್ರಿಕ ತೊಂದರೆ ಕಾರಣ ಇರಬಹುದು: ಎಚ್‌ಎಎಲ್‌

ನವದೆಹಲಿ: ಇತ್ತೀಚೆಗೆ ತೇಜಸ್ ಜೆಟ್ ವಿಮಾನ ಅಪಘಾತಕ್ಕೆ ಈಡಾದ ಕಾರಣ ಭಾರತೀಯ ವಾಯುಪಡೆಯ (ಐಎಎಫ್‌) 30ಕ್ಕೂ ಹೆಚ್ಚು ತೇಜಸ್ ಲಘು ಯುದ್ಧ ವಿಮಾನಗಳನ್ನು 'ನಿಯಮಿತ ನಿರ್ವಹಣಾ ತಪಾಸಣೆ'ಗೆ ಒಳಪಡಿಸಲಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

 ಐಎಎಫ್ ಮತ್ತು ವಿಮಾನ ತಯಾರಿಕಾ ಸಂಸ್ಥೆ ಎಚ್‌ಎಎಲ್ 'ಘಟನೆಗೆ ಕಾರಣವಾದ ಅಂಶಗಳ ವಿಶ್ಲೇಷಣೆ' ಮಾಡುತ್ತಿವೆ ಮತ್ತು ವಿಶ್ಲೇಷಣೆಯ ಆಧಾರದ ಮೇಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಎಚ್‌ಎಎಲ್ ನೀಡಿರುವ ಹೇಳಿಕೆಯಲ್ಲಿ, 'ತೇಜಸ್ ಅಪಘಾತದ (ಅಪ್ಪಳಿಸಿರುವ) ಬಗ್ಗೆ ಯಾವುದೇ ವರದಿ ಇಲ್ಲ. ಸಣ್ಣ ಪ್ರಮಾಣದ ತಾಂತ್ರಿಕ ತೊಂದರೆ ಅವಘಡಕ್ಕೆ ಕಾರಣ ಇರಬಹುದು' ಎಂದು ತಿಳಿಸಿದೆ.

2024ರ ಮಾರ್ಚ್‌ನಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪತನಗೊಂಡಿತ್ತು. 2025ರ ನವೆಂಬರ್‌ನಲ್ಲಿ ದುಬೈನಲ್ಲಿ ಹಾರಾಟದ ಹಂತದಲ್ಲೇ ತೇಜಸ್ ವಿಮಾನ ಹೊತ್ತಿ ಉರಿದು ಪೈಲಟ್ ಮೃತಪಟ್ಟಿದ್ದರು.

ಇತ್ತೀಚಿನ ದಿನಗಳಲ್ಲಿ ಇದು ತೇಜಸ್‌ನ ಎರಡನೇ ಅಪಘಾತವಾಗಿದೆ.

ಇತ್ತೀಚೆಗೆ ತರಬೇತಿ ಸಂದರ್ಭದಲ್ಲಿ ತೇಜಸ್ ವಿಮಾನ ಪತನಗೊಂಡಿತ್ತು. ಬ್ರೇಕಿಂಗ್‌ ವ್ಯವಸ್ಥೆಯಲ್ಲಿ ಆದ ಸಮಸ್ಯೆಯಿಂದ ಅಪಘಾತ ನಡೆದಿದೆ ಎಂದು ಶಂಕಿಸಲಾಗಿದೆ. ಇದನ್ನು ಐಎಎಫ್‌ ಮತ್ತು ಎಚ್‌ಎಎಲ್ ದೃಢಪಡಿಸಿಲ್ಲ.

'ಸಮರ ವಿಮಾನಗಳಿಗೆ ಹೋಲಿಸಿದರೆ ತೇಜಸ್ ವಿಶ್ವದ ಸುರಕ್ಷಿತ ವಿಮಾನ ಎನಿಸಿಕೊಂಡಿದೆ. ಘಟನೆಯನ್ನು ಆಳವಾಗಿ ಅಧ್ಯಯನ ಮಾಡಲಾಗುತ್ತಿದೆ. ಐಎಎಫ್‌ ಜೊತೆ ಸೇರಿ ಶೀಘ್ರ ನಿರ್ಧಾರಕ್ಕೆ ಬರಲಿದ್ದೇವೆ' ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries