HEALTH TIPS

ದಿ ಕೇರಳ ಸ್ಟೋರಿ: ಶಾಂತಿ, ಪ್ರೀತಿ ಉತ್ತೇಜಿಸುವ ಚಿತ್ರಗಳು ಬರಲಿ; ಪ್ರಿಯಾಂಕ ಗಾಂಧಿ

ವಯನಾಡ್: ಶಾಂತಿ ಮತ್ತು ಪ್ರೀತಿಯನ್ನು ಉತ್ತೇಜಿಸುವ ಸೃಜನಾತ್ಮಕ ಸಿನಿಮಾಗಳು ಬರಬೇಕು ಎಂದು ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.

ಕೇರಳ ಪ್ರವಾಸದಲ್ಲಿರುವ ಅವರು, 'ದಿ ಕೇರಳ ಸ್ಟೋರಿ-2' ಸಿನಿಮಾ ಬಿಡುಗಡೆಗೆ ನ್ಯಾಯಾಲಯ ತಡೆ ನೀಡಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜನರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಇರಬೇಕು ಎನ್ನುವುದು ನನ್ನ ಅಭಿಪ್ರಾಯ. ಆದರೆ ಪರಸ್ಪರ ಕೋಪ, ದ್ವೇಷ ಮತ್ತು ಪ್ರಚೋದನಾತ್ಮಕ ಭಾಷಣಗಳೇ ತುಂಬಿರುವ ಇಂದಿನ ದಿನಗಳಲ್ಲಿ ಸಂತೋಷ, ಶಾಂತಿ, ಪ್ರೀತಿ ಹಾಗೂ ಜನರ ಕಲ್ಯಾಣವನ್ನು ಉತ್ತೇಜಿಸುವ ಸೃಜನಾತ್ಮಕ ಸಿನಿಮಾಗಳು ಬರಬೇಕು ಎಂಬುದು ವಿಶೇಷ ಎಂದರು.

ಇಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ಧರ್ಮ, ಜಾತಿ ಭೇದವಿಲ್ಲದೆ ಎಲ್ಲರೂ ಪರಸ್ಪರ ಸಹಾಯಹಸ್ತ ಚಾಚಿದ ಉದಾಹರಣೆಯನ್ನು ಅವರು ಉಲ್ಲೇಖಿಸಿದರು.

ತಾನು ವಯನಾಡು ಸಂಸದೆಯಾದ ಬಳಿಕ ಇಲ್ಲಿನ ಜನರು ಹೇಗೆ ಒಗ್ಗಟ್ಟಿನಿಂದ ಬದುಕುತ್ತಾರೆ, ಹಬ್ಬಗಳನ್ನು ಆಚರಿಸುತ್ತಾರೆ ಮತ್ತು ಸಂಕಷ್ಟದ ಸಮಯದಲ್ಲಿ ಪರಸ್ಪರ ನೆರವಾಗುತ್ತಾರೆ ಎಂಬುದನ್ನು ಸಮೀಪದಿಂದ ನೋಡಿದ್ದೇನೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries