HEALTH TIPS

ರಾಹುಲ್ ಗಾಂಧಿ ಫೋಟೋ ಅಳಿಸಲು ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮೇಲೆ ಒತ್ತಡ: ಕೇರಳ ಕಾಂಗ್ರೆಸ್ ಆರೋಪ

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಸಮಾರಂಭದ ಆಹ್ವಾನ ನೀಡುವ ಉದ್ದೇಶದಿಂದ ಮಂಗಳವಾರ ಹೊಸದಿಲ್ಲಿಯಲ್ಲಿ ಹಲವು ಉನ್ನತ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದು, ಆ ಭೇಟಿಗಳ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದರು.

ಆದರೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗಿನ ಫೋಟೋವನ್ನು ಅಳಿಸಲು ಸಚಿನ್ ಮೇಲೆ ಒತ್ತಡ ಹೇರಲಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ಪಕ್ಷದ ಕೇರಳ ಘಟಕವು ಮಾಡಿದ್ದು, ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಫೆಬ್ರವರಿ 11ರ ಬುಧವಾರ ಕಾಂಗ್ರೆಸ್‌ನ ಕೇರಳ ಘಟಕದ ಅಧಿಕೃತ 'ಎಕ್ಸ್' ಹ್ಯಾಂಡಲ್‌ನಲ್ಲಿ ಪ್ರಕಟವಾದ ಪೋಸ್ಟ್‌ನಲ್ಲಿ, ವಿವಿಧ ರಾಷ್ಟ್ರೀಯ ನಾಯಕರೊಂದಿಗೆ ಸಚಿನ್ ಹಂಚಿಕೊಂಡ ಫೋಟೋಗಳ ಪೈಕಿ ರಾಹುಲ್ ಗಾಂಧಿ ಅವರೊಂದಿಗಿನ ಫೋಟೋಗೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದ್ದು, ಅದನ್ನು ಅಳಿಸಿ ಮರುಪೋಸ್ಟ್ ಮಾಡಲು ಒತ್ತಡ ಹೇರಲಾಗಿದೆ ಎಂದು ಆರೋಪಿಸಲಾಗಿದೆ.

ಕೇರಳ ಕಾಂಗ್ರೆಸ್ ಘಟಕವು ನೀಡಿದ ವಿವರಗಳ ಪ್ರಕಾರ, ಸಚಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಫೋಟೋವನ್ನು ಸಂಜೆ 7:13ಕ್ಕೆ, ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಫೋಟೋವನ್ನು ರಾತ್ರಿ 8:18ಕ್ಕೆ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗಿನ ಮತ್ತೊಂದು ಫೋಟೋವನ್ನು ರಾತ್ರಿ 8:48ಕ್ಕೆ ಪೋಸ್ಟ್ ಮಾಡಿದ್ದರು. ರಾತ್ರಿ 9:22ಕ್ಕೆ ಹಂಚಿಕೊಂಡ ರಾಹುಲ್ ಗಾಂಧಿ ಅವರೊಂದಿಗಿನ ಫೋಟೋ ಮಾತ್ರ ವೇಗವಾಗಿ ವೈರಲ್ ಆಗಿ ಜನರ ಗಮನ ಸೆಳೆಯಿತು ಎಂದು ಹೇಳಲಾಗಿದೆ.

"ಈ ಎಲ್ಲ ಪೋಸ್ಟ್‌ ಗಳಲ್ಲಿ ರಾಹುಲ್ ಗಾಂಧಿ ಅವರೊಂದಿಗಿನ ಫೋಟೋ ವೇಗವಾಗಿ ವೈರಲ್ ಆಯಿತು. ಕೇವಲ ಎರಡು ಗಂಟೆಗಳಲ್ಲಿ 6.27 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು" ಎಂದು ಕಾಂಗ್ರೆಸ್ ಕೇರಳ ಘಟಕ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ.

ಒಮ್ಮೆಲೇ ವೀಕ್ಷಣೆಯಲ್ಲಿನ ಈ ಹೆಚ್ಚಳವು ಯಾರನ್ನೂ ನೇರವಾಗಿ ಹೆಸರಿಸದೇ "ದಿ ಕಿಂಗ್" ಎಂದು ಉಲ್ಲೇಖಿಸಲಾದ ವ್ಯಕ್ತಿಗೆ ಅಸಮಾಧಾನ ಉಂಟುಮಾಡಿತು ಎಂದು ಕಾಂಗ್ರೆಸ್ ಆರೋಪಿಸಿದೆ. ಕಡಿಮೆ ಬಳಕೆದಾರರು ಸಕ್ರಿಯರಾಗಿರುವ ಹೊತ್ತಿನಲ್ಲಿ ಫೋಟೋವನ್ನು ಅಳಿಸಿ ಸದ್ದಿಲ್ಲದೆ ಮರುಅಪ್‌ಲೋಡ್ ಮಾಡಲು ಸಚಿನ್ ಮೇಲೆ ಒತ್ತಡ ಹೇರಲಾಗಿದೆ ಎಂಬ ಹೇಳಿಕೆಯನ್ನೂ ಪೋಸ್ಟ್‌ನಲ್ಲಿ ಮಾಡಲಾಗಿದೆ.

"ಕಿಂಗ್ ನ ಜನರು ಸಚಿನ್ ಅವರ ಪೋಸ್ಟ್ ಅನ್ನು ಅಳಿಸಿ, ಜನರ ಗಮನ ಕಡಿಮೆ ಇರುವ ಸಮಯವಾದ ರಾತ್ರಿ 12:19ಕ್ಕೆ ಮರುಪೋಸ್ಟ್ ಮಾಡುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಆ ಹೊತ್ತಿಗೆ ಜನರು ಈಗಾಗಲೇ ಗಮನಿಸಿದ್ದರು" ಎಂದು ಕಾಂಗ್ರೆಸ್ ಕೇರಳ ಹ್ಯಾಂಡಲ್ ಹೇಳಿಕೊಂಡಿದೆ.

ಇದೇ ವೇಳೆ ಕೇಂದ್ರ ನಾಯಕತ್ವವನ್ನು ಟೀಕಿಸಿದ ಕಾಂಗ್ರೆಸ್ ತನ್ನ ಪೋಸ್ಟ್‌ನಲ್ಲಿ, "ದೇಶದ ಅತ್ಯುನ್ನತ ಕುರ್ಚಿಯಲ್ಲಿ ಕುಳಿತಿರುವವರು ಸಾಮಾಜಿಕ ಮಾಧ್ಯಮದ ವೀಕ್ಷಣೆಗಳಿಂದಲೇ ಅಸುರಕ್ಷಿತರಾಗುತ್ತಿದ್ದರೆ, ಅದು ಬಲವಲ್ಲ; ಅದು ಅಧಿಕಾರದ ವೇಷ ತೊಟ್ಟ ಆಳವಾದ ಅಭದ್ರತೆ" ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries