ಕಾಸರಗೋಡು: ಶಿವರಾತ್ರಿ ಮಹೋತ್ಸವ ಅಂಗವಾಗಿ ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 65ನೇ ಭಜನಾ ಮಹೋತ್ಸವ ಆಯೋಜಿಸಲಾಯಿತು. ಬೆಳಗ್ಗೆ ದೇವಸ್ಥಾನದಲ್ಲಿ ಗಣಪತಿ ಹೋಮ, ದೀಪ ಪ್ರತಿಷ್ಠೆ ನಡೆಯಿತು. ವಿವಿಧಭಜನಾ ಸಂಗಮದ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗುಡ್ಡೆ ಶ್ರೀ ಮಹಾಲಿಂಗೇಶ್ವರ ಸನಾತನ ಧರ್ಮ ಪಾಠಶಾಲೆಯ ಮಕ್ಕಳಿಂದ ನೃತ್ಯ ಭಜನೆ ನಡೆಯಿತು. ನಂತರ ದೇವಸ್ಥಾನದಲ್ಲಿ ನಾಗತಂಬಿಲ, ಮಹಾಪೂಜೆ, ತುಲಾಭಾರ, ದೀಪಾವರಣ ನಡೆಯಿತು. ಪ್ರಸಾದ ವಿತರಿಸಲಾಯಿತು. ಸಂಜೆ ಕೇಳುಗುಡ್ಡೆ ಶ್ರೀಅಯ್ಯಪ್ಪ ಬಜನಾ ಮಂದಿರ ಹಾಗೂ ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಬಜನಾ ಮಂದಿರ ವತಿಯಿಂದ ಹಸಿರುವಾಣಿ ಸಮರ್ಪಣೆ ಹಾಗೂ ಮಹಾಪೂಜೆ ನಡೆಯಿತು.
ಶಿವರಾತ್ರಿ ಮಹೋತ್ಸವ ಅಂಗವಾಗಿ ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆ,ಅಭಿಷೇಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

