ಕಾಸರಗೋಡು: ಗ್ರಾಮ ಪಂಚಾಯಿತಿಗಳ ಹೊಸದಾಗಿ ಆಯ್ಕೆಯಾದ ಪ್ರತಿನಿಧಿಗಳಿಗೆ ಬುಧವಾರ ತರಬೇತಿ ಆರಂಭಗೊಂಡಿದ್ದು, 5ರ ವರೆಗೆ ಕಾಞಂಗಾಡ್ ಬ್ಲಾಕ್ ಮಿತಿಯಲ್ಲಿರುವ ಪಂಚಾಯಿತಿಗಳಿಗೆ ತರಬೇತಿ ಕಾಞಂಗಾಡ್‍ನ ಎಮಿರೇಟ್ಸ್ ಹೋಟೆಲ್‍ನಲ್ಲಿ ನಡೆಯಲಿದೆ. ಪರಪ್ಪ ಬ್ಲಾಕ್ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಫೆಬ್ರವರಿ 5 ಮತ್ತು 6 ರಂದು ಒಡೆಯಂಚಲ್‍ನ ರಾಯಲ್ ಮಾಲ್ ಮಿನಿ ಆಡಿಟೋರಿಯಂನಲ್ಲಿ ತರಬೇತಿ ನಡೆಯಲಿದೆ. ಕಾರಡ್ಕ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯತ್‍ಗಳಿಗೆ ಫೆಬ್ರವರಿ 6 ಮತ್ತು7ರಂದು ಕಾಸರಗೋಡಿನ ಪೆÇವ್ವಲ್ ಮಹಿಳಾ ತರಬೇತಿ ಕೇಂದ್ರದಲ್ಲಿ ತರಬೇತಿ ನಡೆಯಲಿದೆ.
ಫೆ. 9 ಮತ್ತು 10 ರಂದು ಕಾಸರಗೋಡು ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಗ್ರಾಪಂ ಸದಸ್ಯರಿಗೆ ತರಬೇತಿಯು ಉದಯಗಿರಿಯ ಗ್ರಂಥಾಲಯ ಮಂಡಳಿ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ. ಫೆಬ್ರವರಿ 10-11 ರಂದು ನೀಲೇಶ್ವರಂ ಬ್ಲಾಕ್ ಪಂಚಾಯತ್ ಮಿತಿಯ ಗ್ರಾಮ ಪಂಚಾಯಿತಿಗಳಿಗೆ ತರಬೇತಿ ಚೆರುವತ್ತೂರು ತೇಜಸ್ವಿನಿ ರೆಸಿಡೆನ್ಸಿ ಹಾಲ್‍ನಲ್ಲಿ ನಡೆಯಲಿದೆ. ಮಂಜೇಶ್ವರಂ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ತರಬೇತಿ ಫೆಬ್ರವರಿ 13 ಮತ್ತು 14 ರಂದು ಉಪ್ಪಳ ವಿಂಟರ್ ಸೆಲೆಬ್ರೇಶನ್ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ನಗರಸಭೆ ಅಧ್ಯಕ್ಷರಿಗೆ ತರಬೇತಿ ಕಿಲಾದಲ್ಲಿ ಈಗಾಗಲೇ ಪೂರ್ಣಗೊಂಡಿದೆ.

