HEALTH TIPS

ದೆಹಲಿಯಲ್ಲಿ ಉಗ್ರರ ದಾಳಿ ಭೀತಿ: ಕೆಂಪುಕೋಟೆ, ಧಾರ್ಮಿಕ ಕೇಂದ್ರಗಳಲ್ಲಿ ಹೈ ಅಲರ್ಟ್‌

ನವದೆದಲಿ: ಕೆಂಪು ಕೋಟೆ ಬಳಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ದೆಹಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್‌-ಎ-ತಯಬಾ (ಎಲ್‌ಇಟಿ), ಕೆಂಪು ಕೋಟೆಯ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಚಾಂದನಿ ಚೌಕ್‌ನ ಕೆಲವು ಭಾಗಗಳು ಸೇರಿದಂತೆ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಎಎನ್‌ಐ' ವರದಿ ಮಾಡಿದೆ.

ಸಂಘಟನೆಯು, ಸುಧಾರಿತ ಸ್ಫೋಟಕ (ಐಇಡಿ) ದಾಳಿಗೆ ಸಂಚು ರೂಪಿಸುತ್ತಿದೆ. ಚಾಂದನಿ ಚೌಕ್ ಪ್ರದೇಶದಲ್ಲಿರುವ ದೇವಾಲಯವು ಸಂಭಾವ್ಯ ಗುರಿಯಾಗಿರಬಹುದು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫೆ.6ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಸ್ಫೋಟಕ್ಕೆ ಪ್ರತೀಕಾರವಾಗಿ, ಭಾರತದಲ್ಲಿ ಭಾರಿ ದಾಳಿ ನಡೆಸಲು ಸಂಘಟನೆ (ಎಲ್‌ಇಟಿ) ಯೋಜಿಸುತ್ತಿದೆ. ದೇಶದ ಪ್ರಮುಖ ದೇವಾಲಯಗಳನ್ನು ಗುರಿಯಾಗಿಸಬಹುದು ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಅಲ್ಲದೇ ದೇಶದ ಇತರ ಪ್ರಮುಖ ದೇವಾಲಯಗಳು ಸಹ ಎಲ್‌ಇಟಿಯ ಗುರಿಯಾಗಿರಬಹುದು ಎನ್ನಲಾಗಿದೆ.

2025ರ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡು 12 ಜನ ಮೃತಪಟ್ಟಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries