HEALTH TIPS

'S-400 ಸುದರ್ಶನ' ಕ್ಷಿಪಣಿಯ ಪರಾಕ್ರಮವನ್ನು ಜಗತ್ತಿಗೆ ತೋರಿಸಿದ IAF! ಹೀಗ್ಯಾಕೆ Video ರಿಲೀಸ್?

ನವದೆಹಲಿ: ಭಾರತೀಯ ವಾಯುಪಡೆಯ ರಕ್ಷಣಾ ವ್ಯವಸ್ಥೆಯ ಪ್ರಮುಖ ಅಸ್ತ್ರವಾದ ಎಸ್-400 'ಸುದರ್ಶನ್' ದೂರಗಾಮಿ ಕ್ಷಿಪಣಿಯ ಪರಾಕ್ರಮವನ್ನು ತೋರಿಸುವ ವಿಡಿಯೋವೊಂದನ್ನು ಭಾರತೀಯ ವಾಯುಪಡೆ ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಿದೆ. 

ಈ ವಿಡಿಯೋದಲ್ಲಿ ರೇಡಾರ್ ದೂರಗಾಮಿ ಗುರಿಯನ್ನು ಪತ್ತೆ ಮಾಡುತ್ತದೆ.

ನಂತರ ಕ್ಷಿಪಣಿಯು ದೀರ್ಘ ವ್ಯಾಪ್ತಿಯ ಗುರಿಯನ್ನು ಉಡಾಯಿಸುತ್ತದೆ ಮತ್ತು ನಾಶಪಡಿಸುತ್ತದೆ. ಮಿಲಿಟರಿ ಇತಿಹಾಸದಲ್ಲಿ ದಾಖಲಾದ ಅತಿ ಹೆಚ್ಚಿನ ಸಾವಿಗೆ ಕಾರಣವಾದ ಅಸ್ತ್ರ ಎಂಬರ್ಥದ ಟೈಟಲ್ ನಡಿ ಈ ವಿಡಿಯೋವನ್ನು ಸೇನಾಪಡೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಮೇ 2025 ರಲ್ಲಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಕೂಡಾ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಕಾರ್ಯಾಚರಣೆ ವೇಳೆ S-400 ಸಿಸ್ಟಮ್ ಪ್ರಮುಖ ಪಾತ್ರವನ್ನು ವಹಿಸಿದೆ ಮತ್ತು ಪಾಕಿಸ್ತಾನದ ಪ್ರದೇಶದೊಳಗೆ ಸುಮಾರು 300 ಕಿಮೀ ಗುರಿಯನ್ನು ಹೊಡೆಯಲು ಬಳಸಲಾಗಿತ್ತು ಎಂದು IAF ಅಧಿಕಾರಿಗಳು ಹೇಳಿದ್ದಾರೆ.

ರಾಜಸ್ಥಾನದ ಪೋಖ್ರಾನ್‌ನಲ್ಲಿ ವಾಯುಪಡೆಯ ಪ್ರಮುಖ ಪ್ರದರ್ಶನವಾದ ವಾಯು ಶಕ್ತಿ-2026 ರ ತಾಲೀಮಿಗೂ ಮುನ್ನಾ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಅಲ್ಲಿ ಐಎಎಫ್ ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿದ್ಧವಾಗಿದೆ.

ರಷ್ಯಾದ ಅಲ್ಮಾಜ್-ಆಂಟೆ ತಂತ್ರಜ್ಞಾನದಲ್ಲಿ ತಯಾರಾದ ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಭಾರತದಲ್ಲಿ 'ಸುದರ್ಶನ ಚಕ್ರ' ಎಂದು ಕರೆಯಲಾಗುತ್ತದೆ. 2018ರಲ್ಲಿ ರಷ್ಯಾದೊಂದಿಗೆ ಸಹಿ ಹಾಕಿದ ಸುಮಾರು 5.4 ಬಿಲಿಯನ್ ಡಾಲರ್ ಒಪ್ಪಂದದ ಅಡಿಯಲ್ಲಿ ಭಾರತ ಈ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಯುದ್ಧ ವಿಮಾನಗಳು, ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಆಗಸದಲ್ಲಿಯೇ ನಾಶಪಡಿಸುವ ಸಾಮರ್ಥ್ಯ ಇದಕ್ಕಿದೆ.

ಈ ವ್ಯವಸ್ಥೆಯಲ್ಲಿರುವ 40N6 ಕ್ಷಿಪಣಿಗಳು 400 ಕಿಲೋಮೀಟರ್‌ವರೆಗೂ ಗುರಿ ತಲುಪಬಲ್ಲವು. ಅಷ್ಟೇ ಅಲ್ಲ, 600 ಕಿಲೋಮೀಟರ್ ದೂರದಲ್ಲಿರುವ ಶತ್ರುಗಳ ಚಲನವಲನವನ್ನು ಪತ್ತೆಹಚ್ಚುವ ಸಾಮರ್ಥ್ಯ ಇದರ ರಾಡಾರ್‌ಗಳಿಗಿದೆ. 

#WATCH | For the first time, the Indian Air Force shares a video showcasing the Sudarshan S-400 long-range air defence missile system in operation, along with a caption of scoring the longest ever kill recorded in military history. The Indian Air Force had secured the kill Show more
4.1K
Reply
Copy link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries