HEALTH TIPS

Union budget 2026: ಕೇಂದ್ರದಿಂದ ಲೋಕಪಾಲಕ್ಕೆ ₹30 ಕೋಟಿ; CVCಗೆ ₹54.56 ಕೋಟಿ ಹಂಚಿಕೆ

ನವದೆಹಲಿ: ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಲೋಕಪಾಲಕ್ಕೆ ಭಾನುವಾರ ಮಂಡಿಸಲಾದ 2026-27ರ ಕೇಂದ್ರ ಬಜೆಟ್‌ನಲ್ಲಿ ₹30 ಕೋಟಿ ಹಂಚಿಕೆ ಮಾಡಲಾಗಿದ್ದು, ಈ ಹಣವನ್ನು ಅದರ ಆಡಳಿತಾತ್ಮಕ ಮತ್ತು ನಿರ್ಮಾಣ ಅಥವಾ ಮೂಲಸೌಕರ್ಯ ವೆಚ್ಚಗಳನ್ನು ಭರಿಸಲು ಉದ್ದೇಶಿಸಲಾಗಿದೆ.

ಬಜೆಟ್ ದಾಖಲೆ ಪ್ರಕಾರ, ಸರ್ಕಾರವು ಈ ವರ್ಷ ಲೋಕಪಾಲಕ್ಕಾಗಿ ₹32 ಕೋಟಿ ಖರ್ಚು ಮಾಡಲು ಯೋಜಿಸುತ್ತಿದೆ.

ಕಳೆದ ಬಜೆಟ್‌ನಲ್ಲಿ 2025-26ರ ಹಣಕಾಸು ವರ್ಷಕ್ಕೆ ₹44.32 ಕೋಟಿ ಮೀಸಲಿಡಲಾಗಿತ್ತು.

ಲೋಕಪಾಲ್ ಪ್ರಧಾನ ಮಂತ್ರಿ ಸೇರಿದಂತೆ ಸಾರ್ವಜನಿಕ ಕಾರ್ಯಕರ್ತರ ವಿರುದ್ಧ ಕೇಳಿಬರುವ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡಲು ಇರುವ ಸರ್ವೋಚ್ಚ ಸಂಸ್ಥೆಯಾಗಿದೆ.

ಕೇಂದ್ರ ವಿಜಿಲೆನ್ಸ್ ಆಯೋಗಕ್ಕೆ (CVC) 2026-27ಕ್ಕೆ ₹54.56 ಕೋಟಿ ಹಂಚಿಕೆ ಮಾಡಲಾಗಿದೆ. ಬಜೆಟ್ ದಾಖಲೆ ಪ್ರಕಾರ, ಈ ಹಣವು ಅದರ ಆಡಳಿತಾತ್ಮಕ ಮತ್ತು ಕಚೇರಿ ಸಂಬಂಧಿತ ವೆಚ್ಚಗಳನ್ನು ಭರಿಸಲು ಉದ್ದೇಶಿಸಲಾಗಿದೆ.

ಹಿಂದಿನ ಹಣಕಾಸು ವರ್ಷಕ್ಕೆ ಸಿವಿಸಿಗೆ ₹52.07 ಕೋಟಿ ಹಂಚಿಕೆ ಮಾಡಲಾಗಿತ್ತು. ಆದರೆ, ಸದ್ಯದ ಹಣಕಾಸು ವರ್ಷಕ್ಕೆ ಈ ಹಂಚಿಕೆಯನ್ನು ₹50.66 ಕೋಟಿಗೆ ಇಳಿಸಲಾಗಿದೆ.

ಸಿವಿಸಿ ದೇಶದ ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವ ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries