HEALTH TIPS

ಶ್ರೀಲಂಕಾ ಕರಾವಳಿಯಲ್ಲಿ ಇರಾನಿನ ಹಡಗಿನ ಮೇಲೆ ದಾಳಿ ಶಂಕೆ; 101 ಮಂದಿ ನಾಪತ್ತೆ, 78 ಮಂದಿಗೆ ಗಾಯ

ಕೊಲಂಬೊ: ಶ್ರೀಲಂಕಾ ಕರಾವಳಿಯ ಸಮೀಪ ಇರಾನಿನ ಹಡಗಿನ ಮೇಲೆ ನಡೆದಿರಬಹುದೆಂದು ಶಂಕಿಸಲಾಗಿರುವ ಸಬ್ ಮರೀನ್ ದಾಳಿಯ ಬಳಿಕ ಹಡಗು ಮುಳುಗಿದ ಪರಿಣಾಮ ಕನಿಷ್ಠ 101 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, 78 ಮಂದಿ ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಬುಧವಾರ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಮಾತನಾಡಿದ ಮೂಲಗಳ ಪ್ರಕಾರ, ಹಡಗು ಮುಳುಗಿದ್ದು, ದಾಳಿಯನ್ನು ಯಾರು ನಡೆಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬೆಳಿಗ್ಗೆ 6 ಗಂಟೆಗೆ ವಿಪತ್ತು ಕರೆ

ಶ್ರೀಲಂಕಾದ ವಿದೇಶಾಂಗ ಸಚಿವೆ ವಿಜಿತಾ ಹೆರಾತ್ ಸಂಸತ್ತಿನಲ್ಲಿ ಮಾತನಾಡುತ್ತಾ, ಹಡಗಿನಿಂದ ಬೆಳಿಗ್ಗೆ ಸುಮಾರು 6 ಗಂಟೆಗೆ ಬಂದ ವಿಪತ್ತು ಕರೆಗೆ ಸ್ಪಂದಿಸಿ ನೌಕಾಪಡೆ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ ಎಂದು ತಿಳಿಸಿದ್ದಾರೆ.

"ಈ ಹಂತದಲ್ಲಿ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ 79 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ 101 ಮಂದಿ ಕಾಣೆಯಾಗಿದ್ದಾರೆ ಮತ್ತು ಹಡಗು ಮುಳುಗಿದೆ," ಎಂದು ಶ್ರೀಲಂಕಾ ನೌಕಾಪಡೆಯ ಮೂಲವೊಂದು ತಿಳಿಸಿದೆ.

ಸಂಸತ್ತಿನಲ್ಲಿ ಮಾತನಾಡಿದ ಹೆರಾತ್, ಕಾರ್ಯಾಚರಣೆಯ ಹೆಚ್ಚಿನ ವಿವರಗಳನ್ನು ನೀಡದೆ, ಸೇನೆಯು ಹಡಗಿನಲ್ಲಿದ್ದ ಕನಿಷ್ಠ 30 ಮಂದಿಯನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ.

"ಈ ಘಟನೆಗೆ ಸಂಬಂಧಿಸಿದಂತೆ ಶ್ರೀಲಂಕಾ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ" ಎಂದು ಹೇಳಿದರು.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ದಕ್ಷಿಣ ಶ್ರೀಲಂಕಾದ ಗ್ಯಾಲೆ ಕರಾವಳಿಯ ಸಮೀಪ ಹಡಗು ಸಂಕಷ್ಟದ ಸೂಚನೆ ನೀಡಿತ್ತು. ಗಾಯಗೊಂಡವರನ್ನು ಗ್ಯಾಲೆ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries