HEALTH TIPS

ಆಂಧ್ರ ಪ್ರದೇಶ: 2ನೇ ಮಗು ಪಡೆದರೆ 25,000 ರೂ. ಪ್ರೋತ್ಸಾಹ ಧನ- ಸಿಎಂ ಚಂದ್ರಬಾಬು ನಾಯ್ಡು

ಅಮರಾವತಿ: ಆಂಧ್ರಪ್ರದೇಶದ ತೆಲುಗು ದೇಶಂ ಪಾರ್ಟಿ (TDP) ನೇತೃತ್ವದ ಎನ್‌ಡಿಎ ಸರ್ಕಾರ ಎರಡನೇ ಮಗು ಪಡೆಯುವ ದಂಪತಿ 25,000 ರೂ. ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. 

ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು, ಫಲವಂತಿಕೆ ದರ, ವಯಸ್ಸಾದ ಜನರು ಮತ್ತು ದಕ್ಷಿಣ ಭಾರತಕ್ಕೆ ಕಡಿಮೆಯಾದ ಸಂಸದೀಯ ಪ್ರಾತಿನಿಧ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ, ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಜನರಿಗೆ ಹೇಳಿದರು.

ಬಳಿಕ ಎರಡು ಅಥವಾ ಮೂರನೇ ಮಗು ಹೊಂದುವ ದಂಪತಿಗೆ ಸರ್ಕಾರದಿಂದ 25,000 ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು. ತಮ್ಮ ಜನಸಂಖ್ಯಾ ನಿರ್ವಹಣಾ ಯೋಜನೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತರಲಿದೆ ಎಂದರು.

ಪ್ರಸ್ತುತ, ಸುಮಾರು ಶೇ.58 ರಷ್ಟು ಕುಟುಂಬಗಳು ಕೇವಲ ಒಂದು ಮಗುವನ್ನು ಹೊಂದಿವೆ. ಸುಮಾರು 2.17 ಲಕ್ಷ ಕುಟುಂಬಗಳು ಎರಡು ಮಕ್ಕಳನ್ನು ಹೊಂದಿದ್ದು, ಸುಮಾರು 62 ಲಕ್ಷ ಕುಟುಂಬಗಳು ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಎಂದು ಅವರು ವಿಧಾನಸಭೆಗೆ ವಿವರಿಸಿದರು. ರಾಜ್ಯದಲ್ಲಿ ಪ್ರಸ್ತುತ ಒಟ್ಟು ಫಲವಂತಿಕೆ ದರ ಶೇ. 1.5 ರಷ್ಟಿದ್ದು, ಇದು ನಿಗದಿತ ಮಟ್ಟಕ್ಕಿಂತ ಕಡಿಮೆಯಿದೆ. ಇದನ್ನು ಶೇ.2.1ಕ್ಕೆ ಏರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ವಯಸ್ಸಾದ ಜನರಿಂದಾಗಿ ಅನೇಕ ದೇಶಗಳು ವಿವಿಧ ಸವಾಲುಗಳನ್ನು ಎದುರಿಸುತ್ತಿವೆ. ರಾಜ್ಯ ಸರ್ಕಾರ ಮಾರ್ಚ್ ಅಂತ್ಯದ ವೇಳೆಗೆ ಜನಸಂಖ್ಯಾ ನಿರ್ವಹಣೆ ಕುರಿತು ನೀತಿಯನ್ನು ರೂಪಿಸಿ ಏಪ್ರಿಲ್ ನಿಂದ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries