HEALTH TIPS

ಅಂಗಾಂಗ ಕಸಿ | 2025ರಲ್ಲಿ 217 ನೋಂದಾಯಿತ ಆಸ್ಪತ್ರೆಗಳು ಎನ್‌ಆರ್‌ಪಿಗೆ ದತ್ತಾಂಶ ವರದಿ ಮಾಡಲು ವಿಫಲ

ನವದೆಹಲಿ: ಅಂಗಾಂಗ ಕಸಿ ಮಾಡುತ್ತಿರುವ ಒಟ್ಟು 804 ನೋಂದಾಯಿತ ಆಸ್ಪತ್ರೆಗಳಲ್ಲಿ 217 ಆಸ್ಪತ್ರೆಗಳು 2025ರಲ್ಲಿ ರಾಷ್ಟ್ರೀಯ ನೋಂದಣಿ ಪೋರ್ಟಲ್ (ಎನ್‌ಆರ್ಪಿ)ನಲ್ಲಿ ದತ್ತಾಂಶವನ್ನು ವರದಿ ಮಾಡಲು ವಿಫಲವಾಗಿವೆ. ಈ ಆಸ್ಪತ್ರೆಗಳ ವಿರುದ್ಧ ಆಯಾ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಲಿವೆ ಎಂದು ಕೇಂದ್ರ ಆರೋಗ್ಯ ಖಾತೆಯ ಸಹಾಯಕ ಸಚಿವ ಪ್ರತಾಪ್ರಾವ್ ಜಾಧವ್ ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.

ಅಂಗಾಂಗ ಕಸಿ ನಡೆಸಲು ಆಸ್ಪತ್ರೆಗಳ ನೋಂದಣಿಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸೂಕ್ತ ಪ್ರಾಧಿಕಾರ ಮಾಡುತ್ತದೆ ಎಂದು ಜಾಧವ್ ಅವರು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದರು.

ಮಾನವ ಅಂಗಾಂಗ ಹಾಗೂ ಅಂಗಾಂಶ ಕಸಿ ಕಾಯ್ದೆ, 1984 ಹಾಗೂ ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ ಅಂತಹ ಆಸ್ಪತ್ರೆಗಳ ವಿರುದ್ಧ ನಿಯಂತ್ರಣ ಕ್ರಮಗಳನ್ನು ರಾಜ್ಯ ಸರಕಾರಗಳು ತೆಗೆದುಕೊಳ್ಳುತ್ತದೆ ಎಂದು ಜಾಧವ್ ಹೇಳಿದ್ದಾರೆ.

ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಂಶ ಕಸಿ ನೋಂದಣಿ ಪೋರ್ಟಲ್ 2015ರಿಂದ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಂಶ ಕಸಿ ಸಂಸ್ಥೆಯ ವೆಬ್ಸೈಟ್ ಮೂಲಕ ಆಸ್ಪತ್ರೆಗಳು ಹಾಗೂ ಸಂಸ್ಥೆಗಳು ಸೇರಿದಂತೆ ಅಧಿಕೃತ ಬಳಕೆದಾರರಿಗೆ ಇದು ಲಭ್ಯವಾಗುತ್ತದೆ.

2026 ಮಾರ್ಚ್ 3ರ ವರೆಗೆ ಆಸ್ಪತ್ರೆಗಳು ಹಾಗೂ ಕಸಿ ಕೇಂದ್ರಗಳು ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಂಶ ಕಸಿ ಸಂಸ್ಥೆಯ ರಾಷ್ಟ್ರೀಯ ನೋಂದಣಿ ಪೋರ್ಟಲ್ ನಲ್ಲಿ ವರದಿ ಮಾಡಿದ ದತ್ತಾಂಶದ ಪ್ರಕಾರ ದೇಶದಲ್ಲಿ 89,839 ಜನರು ಪ್ರಮುಖ ಅಂಗಾಂಶ ಕೃಷಿಗಾಗಿ ಕಾಯುವವರ ಪಟ್ಟಿಯಲ್ಲಿ ಇದ್ದಾರೆ.

2025ರಲ್ಲಿ ದೇಶದಲ್ಲಿ 20,019 ಅಂಗಾಂಶ ಕಸಿ ಮಾಡಲಾಗಿದೆ ಎಂದು ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries