HEALTH TIPS

2030ಕ್ಕೆ 5 ಟ್ರಿಲಿಯನ್ ಮೀರಲಿದೆ ಭಾರತದ ಆರ್ಥಿಕತೆ: ಪ್ರಹ್ಲಾದ್‌ ಜೋಶಿ

ನವದೆಹಲಿ: ಭಾರತ ಅತಿ ವೇಗದಲ್ಲಿ ಆರ್ಥಿಕ ಬೆಳವಣಿಗೆ ಹೊಂದುತ್ತಿದ್ದು, 2030ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಸೋಮವಾರ ಸೆಂಟ್ರಲ್ ವೇರ್ ಹೌಸ್‌ನ 70ನೇ ಸಂಸ್ಥಾಪನಾ ದಿನದ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಮತ್ತು ಸಮರ್ಥ ನಾಯಕತ್ವ, ದಕ್ಷ ಆಡಳಿತದಲ್ಲಿ ಭಾರತ ಇಂದು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದ್ದು, ಮೂರನೇ ಆರ್ಥಿಕತೆಯತ್ತ ಸಾಗುತ್ತಿದೆ ಎಂದು ಹೇಳಿದರು.

ಕಳೆದ ಹತ್ತು, ಹನ್ನೆರೆಡು ವರ್ಷಗಳ ಹಿಂದೆ ಭಾರತ 2 ಟ್ರಿಲಿಯನ್ ಆರ್ಥಿಕತೆಯಲ್ಲಿತ್ತು. ಈಗ 4 ಟ್ರಿಲಿಯನ್ ಸನಿಹದಲ್ಲಿದೆ. 2027ರ ವೇಳೆಗೆ 5 ಟ್ರಿಲಿಯನ್ ಹೊಂದಲಿದ್ದು, 2030 ರ ಹೊತ್ತಿಗೆ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುವ ಭರವಸೆಯಲ್ಲಿದೆ ಎಂದು ತಿಳಿಸಿದರು.

ನಮ್ಮ ರಾಷ್ಟ್ರವು ವಿಶ್ವಾಸ, ಭರವಸೆ ಮತ್ತು ಅವಕಾಶದ ನಿರ್ಣಾಯಕ ಕ್ಷಣದಲ್ಲಿ ನಿಂತಿದೆ. ಆರ್ಥಿಕ ಪ್ರಯಾಣ ದಕ್ಷತೆ ಮತ್ತು ಸುಧಾರಣೆಯಲ್ಲಿ ವೇಗದ ಬೆಳವಣಿಗೆ ಕಾಣುತ್ತಿದೆ ಎಂದು ಪ್ರತಿಪಾದಿಸಿದರು.

ಸೆಂಟ್ರಲ್ ವೇರ್ ಹೌಸ್ ನಿಗಮವು ಆರ್ಥಿಕ ಸಾಧನೆಯಲ್ಲಿ ದಾಖಲೆ ನಿರ್ಮಿಸಿದ್ದು, ಭಾರತದ ಲಾಜಿಸ್ಟಿಕ್ಸ್ ಮತ್ತು ಗೋದಾಮು ವಲಯವನ್ನು ಬಲಪಡಿಸುವಲ್ಲಿ ನಿರಂತರ ಕೊಡುಗೆ ನೀಡುತ್ತಿದೆ. ವಹಿವಾಟು ಮತ್ತು ಲಾಭದಲ್ಲಿ ಹಿಂದಿನ ಮಾನದಂಡಗಳನ್ನು ಮೀರಿ CWC ಬಲವಾದ ಆರ್ಥಿಕತೆ ಮತ್ತು ಕಾರ್ಯತಂತ್ರದ ಮೂಲಕ ಸಾರ್ವಜನಿಕ ವಲಯದ ಪ್ರಮುಖ ಉದ್ಯಮವಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries