HEALTH TIPS

ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಉಳಿಯತ್ತಡ್ಕದ ಶ್ರೀ ಶಕ್ತಿ ಭಜನಾ ಮಂದಿರ- 26 ರಂದು ಚಂಡಿಕಾಯಾಗ

ಮಧೂರು : ಉಳಿಯತ್ತಡ್ಕ ಗಣೇಶ ನಗರದ ಶ್ರೀ ಶಕ್ತಿ ಭಜನಾ ಮಂದಿರವು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ಮಾ. 24 ರಿಂದ 26ರ ವರೆಗೆ ವಿಧಿ ವಿಧಾನಗಳು ಜರಗಲಿದೆ. ಶ್ರೀ ಶಕ್ತಿ ಭಜನಾ ಮಂದಿರದ  ಪರಿಸರದಲ್ಲಿರುವ  ಶ್ರೀಬಜ್ರಂಗಬಲಿ ವ್ಯಾಯಾಮ ಶಾಲೆಯ 46ನೇ ವಾರ್ಷಿಕ ಉತ್ಸವ 24 ರಂದು ಸಂಪನ್ನಗೊಳ್ಳಲಿದೆ. ಇಂದು ಬೆಳಗ್ಗೆ ದೀಪಾರಾಧನೆ, ಭಜನೆ, 10ಕ್ಕೆ ಸಾಮೂಹಿಕ ಶ್ರೀ ಶನೀಶ್ವರ ಪೂಜೆ, 12.30ಕ್ಕೆ ಮಹಾಪೂಜೆ ಬಳಿಕ ಅನ್ನ ಪ್ರಸಾದ, ರಾತ್ರಿ 8.30 ರಿಂದ ನೃತ್ಯ ವೈಭವ ನಡೆಯಲಿದೆ.

25 ರಂದು ಶ್ರೀ ಶಕ್ತಿ ಭಜನಾ ಮಂದಿರದಲ್ಲಿ ಬೆಳಿಗ್ಗೆ 10.ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಬಳಿಕ ಅನ್ನಪ್ರಸಾದ ವಿತರಣೆ, ಸಂಜೆ 6.40ಕ್ಕೆ ದೀಪಾರಾಧನೆ, ಭಜನೆ ರಾತ್ರಿ 9.ಕ್ಕೆ ಮೂಲಸ್ಥಾನದಿಂದ ಘೋಷಯಾತ್ರೆ, ರಾತ್ರಿ 10.30ಕ್ಕೆ ತಿರುವಾದಿರ, ರಾತ್ರಿ 12ಕ್ಕೆ ಸರ್ವಾಲಂಕಾರ ಪೂಜೆ ಜರಗಲಿದೆ. 26 ರಂದು ಬೆಳಗ್ಗೆ 9ಕ್ಕೆ ಶ್ರೀ ಶಕ್ತಿ ಸನ್ನಿಧಿಯಲ್ಲಿ ಚಂಡಿಕಾಯಾಗ ಆರಂಭವಾಗಲಿದೆ. ಶ್ರೀಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉಪಸ್ಥಿತರಿರುವರು. ತಂತ್ರಿ  ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ನೇತೃತ್ವ ವಹಿಸುವರು. ಸಂಜೆ 3.ಕ್ಕೆ ಗುಳಿಗನ ಕೋಲ ಜರಗಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries