HEALTH TIPS

ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನದಿಂದ ವಾಯುದಾಳಿ; ಕನಿಷ್ಠ 400 ಮಂದಿ ಮೃತ್ಯು : ವರದಿ

ಕಾಬೂಲ್: ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಗರದ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನ ಪಡೆಗಳು ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 400 ಮಂದಿ ಮೃತಪಟ್ಟು ಇತರ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಪ್ರಕಟಿಸಿದೆ.

ಆದರೆ ಪಾಕಿಸ್ತಾನ ಈ ಆರೋಪವನ್ನು ನಿರಾಕರಿಸಿದ್ದು, ಪೂರ್ವ ಅಫ್ಘಾನಿಸ್ತಾನದಲ್ಲಿ ಸೇನೆ ಮತ್ತು ಭಯೋತ್ಪಾದನಾ ಕೇಂದ್ರಗಳನ್ನು ಗುರಿ ಮಾಡಿ ಮಾತ್ರವೇ ವಾಯುದಾಳಿ ನಡೆದಿದೆ ಎಂದು ಹೇಳಿಕೊಂಡಿದೆ.

ಸ್ಥಳೀಯ ಮಾಧ್ಯಮದ ಜತೆಗಿನ ಟಿವಿ ಸಂದರ್ಶನದಲ್ಲಿ ಸಾವುನೋವಿನ ವಿವರ ನೀಡಿದ ಆರೋಗ್ಯ ಸಚಿವಾಲಯ ವಕ್ತಾರ ಶರಾಫತ್ ಝಮಾನ್, ಮಾದಕವ್ಯಸನಿಗಳ ಚಿಕಿತ್ಸಾ ಆಸ್ಪತ್ರೆ ಸಂಪೂರ್ಣ ಧ್ವಂಸವಾಗಿದೆ ಎಂದು ಹೇಳಿದ್ದಾರೆ. ಉಪ ಸರ್ಕಾರಿ ವಕ್ತಾರ ಹಮಾದುಲ್ ಫಿತ್ರಾತ್ ಅವರ ಪ್ರಕಾರ, ಸಾವಿನ ಸಂಖ್ಯೆ 400ನ್ನು ದಾಟಿದೆ ಹಾಗೂ 250 ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ 9.00 ಗಂಟೆಯ ವೇಳೆಗೆ ಅಫ್ಘಾನ್ ರಾಜಧಾನಿಯಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ ಹಾಗೂ ಶರ್ಹ್ ಇ-ನವ್ ಮತ್ತು ವಾಜೀರ್ ಅಕ್ಬರ್ ಖಾನ್ ಪ್ರದೇಶಗಳಿಂದ ದಟ್ಟ ಹೊಗೆ ಕಂಡುಬಂದಿದೆ. ಇಡೀ ಕಟ್ಟಡವನ್ನು ವ್ಯಾಪಿಸಿರುವ ಬೆಂಕಿ ಆರಿಸಲು ಅಗ್ನಿಶಾಮಕ ಸಿಬ್ಬಂದಿ ಹೆಣಗಾಡುತ್ತಿರುವ ದೃಶ್ಯಗಳು ಸ್ಥಳೀಯ ಟಿವಿ ಚಾನಲ್‍ಗಳಲ್ಲಿ ಪ್ರಸಾರವಾಗಿವೆ.

"ಪಾಕಿಸ್ತಾನ ಸೇನೆ ಮತ್ತೊಮ್ಮೆ ಅಫ್ಘಾನ್ ಪ್ರದೇಶವನ್ನು ಉಲ್ಲಂಘಿಸಿದೆ. ಇದು ಅಪರಾಧ ಕೃತ್ಯ ಹಾಗೂ ಅಮಾನವೀಯ ಕೃತ್ಯ" ಎಂದು ತಾಲಿಬಾನ್ ಸರ್ಕಾರದ ವಕ್ತಾರ ಝಬೀದುಲ್ಲಾ ಮುಜಾಹಿದ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಮೃತಪಟ್ಟ ಮತ್ತು ಗಾಯಗೊಂಡ ಬಹುತೇಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದ ಮಾದಕವಸ್ತು ವ್ಯಸನಿಗಳು ಎಂದು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ಮಾಹಿತಿ ಸಚಿವಾಲಯ ಈ ಆರೋಪವನ್ನು ನಿರಾಕರಿಸಿದ್ದು, "ಅಫ್ಘಾನ್ ತಾಲಿಬಾನ್‍ನ ತಾಂತ್ರಿಕ ಸಲಕರಣೆಗಳು ಮತ್ತು ಶಸ್ತ್ರಾಸ್ತ್ರಗಳ ದಾಸ್ತಾನು ವ್ಯವಸ್ಥೆಯೂ ಸೇರಿದಂತೆ ನಿಖರವಾಗಿ ಸೇನಾ ನೆಲೆಗಳು ಮತ್ತು ಭಯೋತ್ಪಾದನೆಗೆ ಬೆಂಬಲಿಸುವ ಮೂಲಸೌಕರ್ಯಗಳನ್ನು ಹಾಗೂ ಕಾಬಲ್ ಮತ್ತು ನಂಗ್ರಹಾರ್ ನಲ್ಲಿ ನೆಲೆ ನಿಂತಿರುವ ಅಫ್ಘಾನಿಸ್ತಾನದಲ್ಲಿರುವ ಪಾಕಿಸ್ತಾನ ಉಗ್ರರನ್ನು ಗುರಿ ಮಾಡಿ ದಾಳಿ ನಡೆಸಲಾಗಿದೆ" ಎಂದು ಸ್ಪಷ್ಟನೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries