ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ʼವಾರ್ಷಿಕ ಗೌರವ ಪ್ರಶಸ್ತಿʼ ಮತ್ತು ʼಸಾಹಿತ್ಯಶ್ರೀ ಪ್ರಶಸ್ತಿʼಗಳು ಪ್ರಕಟಗೊಂಡಿದ್ದು, ಐವರು ವಾರ್ಷಿಕ ಗೌರವ ಪ್ರಶಸ್ತಿ, 10 ಮಂದಿ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬುಧವಾರ ನಗರದ ಕನ್ನಡ ಭವನದಲ್ಲಿರುವ ಕರ್ನಾಟಕ ಸಾಹಿತ್ಯ ಅಕಾಡಮಿಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರು, ಹಿರಿಯ ಸಾಹಿತಿ ಪ್ರೊ.ಶಿವರಾಮಯ್ಯ, ಚಂದ್ರಶೇಖರ ತಾಳ್ಯ, ಡಾ.ಚಂದ್ರಕಾಂತ ಪೋಕಳೆ, ಲೇಖಕಿ ಡಾ.ವಸುಂಧರಾ ಭೂಪತಿ, ಡಾ.ಎಸ್.ತುಕಾರಾಂ ಅವರು 2025ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿದರು.
ಡಾ.ನಿಷ್ಠಿ ರುದ್ರಪ್ಪ, ಡಾ.ವೀರೇಶ ಬಡಿಗೇರ, ಡಾ.ಸಿ.ಜಿ.ಲಕ್ಷ್ಮೀಪತಿ, ಕಂನಾಡಿಗ ನಾರಾಯಣ, ರೂಪ ಹಾಸನ, ಜಯರಾಮ್ ರಾಯಪುರ, ಕುಮುದಾ ಸುಶೀಲ್, ಡಾ.ಓ.ನಾಗರಾಜು, ಬಿ.ಎಂ.ಬಶೀರ್, ಡಾ.ಜ್ಯೋತಿ ಅವರಿಗೆ 2025ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.

