HEALTH TIPS

ಕೊಲಂಬಿಯಾ ಸೇನಾ ವಿಮಾನ ಅಪಘಾತ: 66 ಸೈನಿಕರ ಸಾವು- ಘಟನೆಯ ಭೀಕರ ವಿಡಿಯೊಗಳು

 ಬೊಗೋಟಾ: ನಿನ್ನೆ ಕೊಲಂಬಿಯಾದ ಸೇನಾ ವಿಮಾನದ ಅಪಘಾತದಲ್ಲಿ ಮೃತ ಸೈನಿಕರ ಸಂಖ್ಯೆ 66 ಎಂದು ಕೊಲಂಬಿಯಾ ಸೇನಾ ವಕ್ತಾರರು ಅಧಿಕೃತ ಮಾಹಿತಿ ನೀಡಿದ್ದಾರೆ. 


ವಿಮಾನದಲ್ಲಿ ಸಿಬ್ಬಂದಿ ಸೇರಿ ಒಟ್ಟು 115 ಜನ ಇದ್ದರು ಎಂದು ತಿಳಿಸಿದ್ದಾರೆ. 66 ಶವಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ನೂ 15 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿವರಿಸಿದ್ದಾರೆ.

ಮೃತರಲ್ಲಿ 6 ವಾಯುಸೇನೆ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಉಳಿದವರು ಸೇನೆಗೆ ಸಂಬಂಧಿಸಿದವರು ಎಂದು ತಿಳಿಸಿದ್ದಾರೆ.

ಕೊಲಂಬಿಯಾದ ಈಕ್ವೆಡಾರ್‌ ಗಡಿ ಬಳಿ ಪೋರ್ಟೊ ಲೆಗಿಜಾಮೊದಿಂದ ಸೈನಿಕರನ್ನು ಹೊತ್ತೊಯ್ಯತ್ತಿದ್ದ 'ಸಿ-130 ಹರ್ಕ್ಯುಲಸ್‌' ವಿಮಾನ 'ಟೇಕ್‌ ಆಫ್‌' ಆಗುತ್ತಿದ್ದಂತೆ ಪತನಗೊಂಡು ಹೊತ್ತಿ ಉರಿದಿತ್ತು.

ಘಟನಾ ಸ್ಥಳದಿಂದ ಸ್ಥಳೀಯ ಜನ ಗಾಯಗೊಂಡ ಸೈನಿಕರನ್ನು ಬೈಕ್‌ನಲ್ಲಿಯೇ ಆಸ್ಪತ್ರೆಗೆ ಸಾಗಿಸುತ್ತಿರುವ ಫೋಟೊ ವಿಡಿಯೊಗಳು ಗಮನ ಸೆಳೆದಿವೆ.

ಇತ್ತೀಚಿನ ವಾರಗಳಲ್ಲಿ ಕೊಲಂಬಿಯಾ ಮತ್ತು ಈಕ್ವೆಡಾರ್‌ನ ಸೇನೆಗಳು ಮಾದಕವಸ್ತು ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಹೀಗಾಗಿ ಈ ಭಾಗದಲ್ಲಿ ಸೈನಿಕರ ಚಲನವಲನ ಹೆಚ್ಚಿದೆ.

'ಇದು ದೊಡ್ಡ ದುರಂತ ಮತ್ತು ಅತ್ಯಂತ ನೋವಿನ ಘಟನೆ. ರಕ್ಷಣಾ ಪಡೆಗಳು ಈಗಾಗಲೇ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಅಪಘಾತಕ್ಕೆ ಕಾರಣವೂ ದೃಢಪಟ್ಟಿಲ್ಲ' ಎಂದು ಕೊಲಂಬಿಯಾದ ರಕ್ಷಣಾ ಸಚಿವ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದು, ದಕ್ಷಿಣ ಅಮೆರಿಕದಲ್ಲಿ ತಿಂಗಳೊಳಗೆ 'ಸಿ-130 ಹರ್ಕ್ಯುಲಸ್‌' ವಿಮಾನ ಅಪಘಾತಗೊಂಡ ಎರಡನೇ ಪ್ರಕರಣ. ಫೆಬ್ರುವರಿ 27ರಂದು ಲಾ ಪಾಜ್‌ ಬಳಿ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಬೊಲಿವಿಯನ್‌ ಸೇನಾ ಸರಕು ವಿಮಾನ ಇಳಿಯುವಾಗ ಅಪಘಾತಕ್ಕೀಡಾಗಿತ್ತು. ಅದರಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries