HEALTH TIPS

ಚತ್ತೀಸ್ ಗಢ | ʼರೋಪ್ ವೇ ಟ್ರಾಲಿʼ ಪತನ: ಮಹಿಳೆ ಸಾವು, 7 ಮಂದಿಗೆ ಗಾಯ

ಮಹಾಸಮುಂದ್: ಚತ್ತೀಸ್ಗಢದ ಮಹಾಸಮುಂದ್ ಜಿಲ್ಲೆಯ ಬೆಟ್ಟದ ಮೇಲಿರುವ ದೇವಾಲಯವೊಂದರಿಂದ ರವಿವಾರ ಕೆಳಗೆ ಇಳಿಯುತ್ತಿದ್ದ ರೋಪ್ವೇ ಟ್ರಾಲಿ ಪತನಗೊಂಡು ಅದರಲ್ಲಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಹಾಗೂ ಇತರ 7 ಮಂದಿ ಗಾಯಗೊಂಡಿದ್ದಾರೆ.

ನಿನ್ನೆ ಬೆಳಗ್ಗೆ ಸರಿ ಸುಮಾರು 10 ಗಂಟೆಗೆ ಈ ಘಟನೆ ಸಂಭವಿಸಿದೆ. ಬೆಟ್ಟದ ಮೇಲಿರುವ ಖಲ್ಲರಿ ಮಾತಾ ದೇವಾಲಯದಿಂದ ಕೆಳಗೆ ಇಳಿಯುತ್ತಿದ್ದ ಟ್ರಾಲಿಯ ಕೇಬಲ್ ತುಂಡಾಗಿ ಅಪಘಾತ ಸಂಭವಿಸಿದೆ. ಈ ಸಂದರ್ಭ ಟ್ರಾಲಿಯಲ್ಲಿ 8 ಮಂದಿ ಇದ್ದರು ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಬಾಗಾಬಹ್ರಾ ಪ್ರದೇಶದಲ್ಲಿರುವ ಖಲ್ಲಾರಿ ಗ್ರಾಮದ ಬೆಟ್ಟದಲ್ಲಿರುವ ಖಲ್ಲಾರಿ ಮಾತಾ ದೇವಾಲಯದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವರು ಇಲ್ಲಿಗೆ ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ರಾಯಪುರದ ಆಯುಷಿ ಸತ್ಕಾರ್ (28) ಎಂದು ಗುರುತಿಸಲಾಗಿದೆ. ಗಾಯಗೊಂಡ ಇತರ 7 ಮಂದಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries