HEALTH TIPS

ಮಂಗಳೂರು: ರಶ್ಯದ ತೈಲ ಟ್ಯಾಂಕರ್, ಅಮೆರಿಕದ ಅನಿಲ ನೌಕೆ ಆಗಮನ

ಮಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಂಡ ಬಳಿಕ ರಶ್ಯದ ತೈಲ ಟ್ಯಾಂಕರ್ ವೊಂದು ಭಾನುವಾರ ಮಂಗಳೂರು ತಲುಪಿದೆ.

'ಆಕ್ವಾ ಟೈಟಾನ್' (Aqua Titan) ಹೆಸರಿನ ಈ ಹಡಗು ಮೂಲತಃ ಚೀನಾಕ್ಕೆ ತೆರಳಬೇಕಿತ್ತು. ದಕ್ಷಿಣ ಚೀನಾ ಸಮುದ್ರದಲ್ಲಿ ಸಂಚರಿಸುತ್ತಿದ್ದ ತೈಲ ಸಾಗಾಟದ ಈ ಬೃಹತ್ ಹಡಗು ಕಳೆದ ವಾರದ ಆರಂಭದಲ್ಲಿ ಅಲ್ಲಿಂದ ಯು-ಟರ್ನ್ ಪಡೆದು ಭಾರತದತ್ತ ಮುಖ ಮಾಡಿತ್ತು.

ಇದೇ ವೇಳೆ, ಅಮೆರಿಕದ ಟೆಕ್ಸಾಸ್ ನಿಂದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಹೊತ್ತ 'ಪಿಕ್ಸಿಸ್ ಪಯೋನೀರ್' (Pyxis Pioneer) ಎಂಬ ಸರಕು ನೌಕೆಯೂ ಇಂದು ನವ ಮಂಗಳೂರು ಬಂದರಿಗೆ ಆಗಮಿಸಿದೆ.

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಂಡಿರುವ ಮಧ್ಯೆ ಇರಾನ್ ಹಾರ್ಮುಝ್ ಜಲಸಂಧಿ ಮುಚ್ಚಿದ್ದರಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂಧನ ಪೂರೈಕೆಯ ಮೇಲೆ ಭಾರೀ ಹೊಡೆತ ಬಿದ್ದಿದೆ. ಈ ಹಡಗುಗಳ ಆಗಮಿಸಿರುವುದರಿಂದ ಪೂರೈಕೆ ಸ್ವಲ್ಪ ಮಟ್ಟಿಗೆ ಉತ್ತಮಗೊಳ್ಳುವ ಸಾಧ್ಯತೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries