ಪಟ್ನಾ: ಬಿಹಾರದ ನಳಂದ ಜಿಲ್ಲೆಯ ದೇಗುಲವೊಂದರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನಳಂದ ಜಿಲ್ಲೆಯ ಮಗಧ ಗ್ರಾಮದಲ್ಲಿ ಶೀತಲಾ ಮಾತಾ ಮಂದಿರದಲ್ಲಿ ಪೂಜೆಯ ವೇಳೆಯಲ್ಲಿ ಕಾಲ್ತುಳಿತ ಸಂಭವಿಸಿದೆ.
ಮೃತರೆಲ್ಲರೂ ಮಹಿಳೆಯರೇ ಆಗಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಭೀತಿಯಿದೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ದೇಗುಲದಲ್ಲಿ ಮಂಗಳವಾರದಂದು ಭಾರಿ ಜನದಟ್ಟಣೆ ಕಂಡುಬಂದಿತ್ತು. ದರ್ಶನದ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದೆ ಎಂದು ತಿಳಿದು ಬಂದಿದೆ.
ಯಾತ್ರಿಕರ ದಟ್ಟಣೆಯನ್ನು ಸರಿಯಾಗಿ ನಿರ್ವಹಿಸಲು ಆಡಳಿತ ವಿಫಲವಾಗಿರುವುದೇ ದುರ್ಘಟಣೆಗೆ ಕಾರಣ ಎನ್ನಲಾಗಿದೆ.

