HEALTH TIPS

Assam Election: 5 ವರ್ಷಗಳಲ್ಲಿ ಸಿಎಂ ಹಿಮಂತ ಶರ್ಮಾ, ಪತ್ನಿ ಆಸ್ತಿ ದ್ವಿಗುಣ

 ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ, ಉದ್ಯಮಿ ರಿನಿಕಿ ಭುಯಾನ್ ಶರ್ಮಾ ಆಸ್ತಿ ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ.

ಅಸ್ಸಾಂ ವಿಧಾನಸಭೆ ಚುನಾವಣೆಗಾಗಿ ಸಲ್ಲಿಸಿದ ನಾಮಪತ್ರ ಅಫಿಡವಿಟ್‌ನಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. 


57 ವರ್ಷದ ಹಿಮಂತ, ಬಿಜೆಪಿ ಅಭ್ಯರ್ಥಿಯಾಗಿ ಜಲುಕಬಾಢಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಒಟ್ಟು ಆಸ್ತಿ ₹35.16 ಕೋಟಿಗೆ ಏರಿಕೆ

ಹಿಮಂತ ಬಿಸ್ವಾ ಹಾಗೂ ಪತ್ನಿ ಆಸ್ತಿಯು 2026ರಲ್ಲಿ ₹35.16 ಕೋಟಿಗೆ ಏರಿಕೆಯಾಗಿದೆ. 2021ರಲ್ಲಿ ಒಟ್ಟು ಆಸ್ತಿಯು ₹17.27 ಕೋಟಿಯಾಗಿತ್ತು.

₹2.36 ಕೋಟಿಯ ಚರಾಸ್ತಿ ಹೊಂದಿರುವುದಾಗಿ ಅಫಿಡವಿತ್‌ನಲ್ಲಿ ಹಿಮಂತ ತಿಳಿಸಿದ್ದಾರೆ. 2021ರಲ್ಲಿ ₹1.72 ಕೋಟಿ ಆಗಿತ್ತು.

ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ ಎಂಬ ಮಾಧ್ಯಮ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಹಿಮಂತ ಅವರ ಪತ್ನಿ ರಿನಿಕಿ, 2026ರಲ್ಲಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿದಂತೆ ಒಟ್ಟು ₹32.79 ಕೋಟಿಯ ಆಸ್ತಿ ಹೊಂದಿದ್ದಾರೆ. 2021ರಲ್ಲಿ ಇದು ₹16.19 ಕೋಟಿ ಆಗಿತ್ತು.

ಮುಖ್ಯಮಂತ್ರಿ ಬಳಿ ₹2.28 ಲಕ್ಷ ನಗದು ಮತ್ತು ನಾಲ್ಕು ಬ್ಯಾಂಕ್‌ಗಳಲ್ಲಿ ₹68,01,943 ಠೇವಣಿ ಇದೆ. ಹಿಮಂತ ಪತ್ನಿ ಬಳಿ ₹3.16 ಲಕ್ಷ ನಗದು ಮತ್ತು ಬ್ಯಾಂಕ್‌ಗಳಲ್ಲಿ ₹74,85,248 ಹಣವಿದೆ.

ಬಾಂಡ್, ಷೇರು, ಮ್ಯೂಚುವಲ್ ಫಂಡ್ ಇತ್ಯಾದಿಗಳಲ್ಲಿ ಹಿಮಂತ ಯಾವುದೇ ಹೂಡಿಕೆಗಳನ್ನು ಹೊಂದಿಲ್ಲ. ಈ ವಿಭಾಗಗಳಲ್ಲಿ ಪತ್ನಿ ₹5.10 ಕೋಟಿ ಹೂಡಿಕೆ ಹೊಂದಿದ್ದಾರೆ.

ಮುಖ್ಯಮಂತ್ರಿಗೆ ಯಾವುದೇ ಜೀವ ವಿಮೆ ಇಲ್ಲ. ಪತ್ನಿಗೆ ₹1,77,55,531 ಮೌಲ್ಯದ ಜೀವ ವಿಮೆ ಇದೆ.

ಹಿಮಂತ ಬಳಿ ಯಾವುದೇ ವಾಹನವಿಲ್ಲ. ಪತ್ನಿ ಬಳಿ ₹21.60 ಲಕ್ಷ ಬೆಲೆ ಬಾಳುವ ಜೀಪ್ ಇದೆ. ಅದನ್ನು 2018ರಲ್ಲಿ ಖರೀದಿಸಿದ್ದರು.

ಸಿಎಂ ಬಳಿ 180 ಗ್ರಾಂ ಚಿನ್ನ ಇದ್ದು, ಇದರ ಮಾರುಕಟ್ಟೆ ಮೌಲ್ಯ ₹25.10 ಲಕ್ಷ ಆಗಿದೆ. ಸಿಎಂ ಪತ್ನಿ ಬಳಿ ₹2.03 ಕೋಟಿ ಮೌಲ್ಯದ 1459.221 ಗ್ರಾಂ ಚಿನ್ನವಿದೆ.

ಹಿಮಂತ ಹಾಗೂ ಪತ್ನಿ ಯಾವುದೇ ಕೃಷಿ ಭೂಮಿ ಹೊಂದಿಲ್ಲ. ಆದರೆ ಪತ್ನಿ ಬಳಿ ಕೃಷಿಯೇತರ ಭೂಮಿ ಇದ್ದು, ಇದರ ಮಾರುಕಟ್ಟೆ ಮೌಲ್ಯ ₹19.25 ಕೋಟಿ ಆಗಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries