ಕಾಸರಗೋಡು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇರಾನಿನ ಫಾರ್ಮುಜ್ ಜಲಸಂಧಿಯಲ್ಲಿ ಕಳೆದ ಹಲವು ದಿವಸಗಳಿಂದ ಸಿಲುಕಿಕೊಂಡಿರುವ ಸರಕು ಹಡಗಿನಲ್ಲಿ ಕಾಸರಗೋಡು ಜಿಲ್ಲೆಯ ಪಳ್ಳಿಕೆರೆ ಹಾಗೂ ಉದುಮ ನಿವಾಸಿಗಳಾದ ನಾವಿಕರು ಹಾಗೂ ಇತರ ಸಿಬ್ಬಂದಿ ಹಡಗಿನಲ್ಲಿ ಬಂಧಿಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಹಡಗಿನಲ್ಲಿರುವವರ ಹೆಸರು ಹಾಗೂ ವಿಳಾಸ ಸದ್ಯಕ್ಕೆ ಬಹಿರಂಗಪಡಿಸಲು ಹಿಂದೇಟು ಹಾಕಿದ್ದಾರೆ ಎಂದು ಮಾಹಿತಿಯಿದೆ.

