HEALTH TIPS

ಇರಾನ್ 'ಉಗ್ರ' ನಾಯಕರ ಸುಳಿವು ಕೊಟ್ಟವರಿಗೆ ಭಾರಿ ಬಹುಮಾನ ಘೋಷಿಸಿದ ಅಮೆರಿಕ

ವಾಷಿಂಗ್ಟನ್‌: ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರೂ ಸೇರಿದಂತೆ, ಆ ರಾಷ್ಟ್ರದ ಪ್ರಮುಖ ನಾಯಕರ ಸುಳಿವು ಕೊಟ್ಟವರಿಗೆ ಭಾರಿ ಬಹುಮಾನ ನೀಡುವುದಾಗಿ ಅಮೆರಿಕ ಘೋಷಣೆ ಮಾಡಿದೆ.

ಅಮೆರಿಕದ ರಾಜತಾಂತ್ರಿಕ ಭದ್ರತಾ ಸೇವೆಗಳ ಇಲಾಖೆಯು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ಕುರಿತು ಇತ್ತೀಚೆಗೆ ಪೋಸ್ಟ್ ಹಂಚಿಕೊಂಡಿದೆ.

ಅದರಲ್ಲಿ 'ಇರಾನ್‌ನ ಭಯೋತ್ಪಾದಕ ನಾಯಕರು' ಎಂದು ಉಲ್ಲೇಖಿಸಿ ಹಲವರ ಚಿತ್ರಗಳು ಹಾಗೂ ಹೆಸರುಗಳನ್ನು ಪ್ರಕಟಿಸಿದೆ.

ಮೊಜ್ತಬಾ ಖಮೇನಿ ಸೇರಿದಂತೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (IRGC) ಉನ್ನತ ನಾಯಕರ ಕುರಿತು ಮಾಹಿತಿ ನೀಡಿದವರಿಗೆ '10 ಮಿಲಿಯನ್ ಡಾಲರ್ (ಅಂದಾಜು ₹ 92 ಕೋಟಿ) ಬಹುಮಾನ ನೀಡಲಾಗುವುದು' ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

'ಇರಾನ್‌ನ ಈ ಭಯೋತ್ಪಾದಕ ನಾಯಕರ ಬಗ್ಗೆ ಮಾಹಿತಿ ಇದೆಯೇ? ನಮಗೆ ಕಳುಹಿಸಿ. ಅದು, ಬಹುಮಾನಕ್ಕೆ ಹಾಗೂ ಬೇರೆಡೆಗೆ ಸ್ಥಳಾಂತರಗೊಳ್ಳುವುದಕ್ಕೆ ನಿಮ್ಮನ್ನು ಅರ್ಹರನ್ನಾಗಿಸಬಹುದು' ಎಂದು ತಿಳಿಸಿದೆ.

ಹಾಗೆಯೇ, 'ಈ (ಚಿತ್ರದಲ್ಲಿರುವ) ವ್ಯಕ್ತಿಗಳು IRGCನ ವಿವಿಧ ಅಂಶಗಳ ಮೇಲಿನ ನಿಯಂತ್ರಣ ಹಾಗೂ ನಿರ್ದೇಶನ ನೀಡುತ್ತಿದ್ದಾರೆ. ಇದು ಪ್ರಪಂಚದಾದ್ಯಂತ ಭಯೋತ್ಪಾದನಾ ಕೃತ್ಯಗಳನ್ನು ಯೋಜಿಸುವ, ಸಂಘಟಿಸುವ ಹಾಗೂ ಕಾರ್ಯಗತಗೊಳಿಸುವಲ್ಲಿ ನಿರತವಾಗಿದೆ. ಇಲ್ಲಿರುವ ಅಥವಾ IRGCಯ ಪ್ರಮುಖ ನಾಯಕರು ಇಲ್ಲವೇ, ಆ ಘಟಕಕ್ಕೆ ಸಂಬಂಧಿಸಿದ ಮಾಹಿತಿ ನಿಮ್ಮಲ್ಲಿದ್ದರೆ, ಅವುಗಳನ್ನು ನಮ್ಮ ಟಾರ್‌ ಆಧಾರಿತ ಟಿಪ್‌ಲೈನ್‌ ಅಥವಾ ಸಿಗ್ನಲ್‌ ಮೂಲಕ ಕಳುಹಿಸಿ' ಎಂದು ತಿಳಿಸಿದೆ.

ಅಮೆರಿಕದ ಬೇಡಿಕೆ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ಅವರ ಕಚೇರಿಯ (ಎಸ್‌ಎಲ್‌ಒ) ಉಪ ಮುಖ್ಯಸ್ಥ ಅಲಿ ಅಸ್ಗರ್ ಹೆಜಾಜಿ, ಎಸ್‌ಎಲ್‌ಒ ಮಿಲಿಟರಿ ಸಲಹೆಗಾರ ಮೇಜರ್ ಜನರಲ್ ವೈಆರ್ ಸಫಾವಿ ಮತ್ತು ಗುಪ್ತಚರ ಇಲಾಖೆ ಸಚಿವ ಇಸ್ಮಾಯಿಲ್ ಖತೀಬ್ ಸೇರಿದಂತೆ ಪ್ರಮುಖರು ಅಮೆರಿಕ ಪಟ್ಟಿಮಾಡಿರುವ ಲಿಸ್ಟ್‌ನಲ್ಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries