ಕಾಸರಗೋಡು: ಕೇರಳಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ನಿಯೋಜಿತರಾಗಿರುವ ಚುನಾವಣಾ ವೀಕ್ಷಕರು ಜಿಲ್ಲೆಯ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣಾ ಅವಲೋಕನ ನಡೆಸಿದರು
2026ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ವಾಹನ ತಪಾಸಣೆ, ಭದ್ರತಾ ವ್ಯವಸ್ಥೆ, ಕರ್ತವ್ಯಕ್ಕಾಗಿ ನಿಯೋಜಿತರಾಗಿರುವ ಸಿಬ್ಬಂದಿಯ ಕಾರ್ಯತತ್ಪರತೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಜನರಲ್ ಒಬ್ಸರ್ವರ್ ವಿಜಯ್ ವಾಘ್ಮಾರೆ ನೇತೃತ್ವದ ಅಧಿಕಾರಿಗಳ ತಂಡ ಪೆರ್ಲ ಆರ್‍ಟಿಓ ಚೆಕ್‍ಪೆÇೀಸ್ಟ್‍ಗೆ ಭೇಟಿ ನೀಡಿ ಅವಲೋಕನ ನಡೆಸಿದರೆ, ಜ್ಞಾನೇಶ್ವರ್ ಕೊಂಡಿಬಾಹು ಖಿಲಾರಿ ಐಎಎಸ್ ನೇತೃತ್ವದ ಅಧಿಕಾರಿಗಳ ತಂಡ ಕಾಞಂಗಾಡ್‍ನ ದುರ್ಗಾ ಹೈಯರ್ ಸೆಕೆಂಡರಿ ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.


