HEALTH TIPS

ಮೂರನೇ ದಿನವೂ ತೈಲ ಬೆಲೆ ಏರಿಕೆ; ಹಾರ್ಮುಜ್ ಜಲಸಂಧಿ ಆತಂಕದಿಂದ ಮಾರುಕಟ್ಟೆಯಲ್ಲಿ ಪೂರೈಕೆಯಲ್ಲಿ ವ್ಯತ್ಯಯ ಭೀತಿ

ಲಂಡನ್: ಇರಾನ್ ಜೊತೆಗಿನ ಅಮೆರಿಕ-ಇಸ್ರೇಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಗೆ ಬೆದರಿಕೆ ಇರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಮೂರನೇ ದಿನವೂ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಭೀತಿ ಹೂಡಿಕೆದಾರರ ಆತಂಕ ಹೆಚ್ಚಿಸಿದೆ.

ಮಂಗಳವಾರ ಬೆಳಿಗ್ಗೆ GMT 04:00ರ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಭವಿಷ್ಯ ವಹಿವಾಟು ಬ್ಯಾರೆಲ್‌ಗೆ 1.70 ಡಾಲರ್ ಅಥವಾ 2.2 ಶೇಕಡಾ ಏರಿಕೆ ಕಂಡು 79.44 ಡಾಲರ್‌ಗೆ ತಲುಪಿತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಸೋಮವಾರ ಬ್ರೆಂಟ್ ಕಾಂಟ್ರಾಕ್ಟ್ 82.37 ಡಾಲರ್‌ಗೆ ಏರಿಕೆ ಕಂಡಿದ್ದು, ಇದು ಜನವರಿ 2025 ನಂತರದ ಗರಿಷ್ಠ ಮಟ್ಟವಾಗಿದೆ. ಬಳಿಕ ಕೆಲವು ಲಾಭ ಕಳೆದುಕೊಂಡಿದ್ದರೂ, ದಿನಾಂತ್ಯಕ್ಕೆ 6.7 ಶೇಕಡಾ ಏರಿಕೆಯಲ್ಲಿ ವಹಿವಾಟು ಮುಕ್ತಾಯಗೊಂಡಿತು.

ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲವೂ ಬ್ಯಾರೆಲ್‌ಗೆ 1.17 ಡಾಲರ್ ಅಥವಾ 1.6 ಶೇಕಡಾ ಏರಿಕೆ ಕಂಡು 72.40 ಡಾಲರ್‌ಗೆ ತಲುಪಿತು. ಹಿಂದಿನ ವಹಿವಾಟಿನಲ್ಲಿ ಈ ಕಾಂಟ್ರಾಕ್ಟ್ ಜೂನ್ 2025 ನಂತರದ ಗರಿಷ್ಠ ಮಟ್ಟಕ್ಕೆ ಏರಿಕೆಯಾದರೂ, ನಂತರ 6.3 ಶೇಕಡಾ ಏರಿಕೆಯಲ್ಲಿ ಸ್ಥಿರವಾಯಿತು.

ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ದ್ವಾರವಾಗಿದ್ದು, ಅಲ್ಲಿ ಉಂಟಾಗುವ ಯಾವುದೇ ವ್ಯತ್ಯಯವು ವಿಶ್ವದ ಪೂರೈಕೆ ಸರಪಳಿಗೆ ನೇರ ಪರಿಣಾಮ ಬೀರುತ್ತದೆ. ಸಂಘರ್ಷದ ತೀವ್ರತೆ ಹೆಚ್ಚುತ್ತಿರುವುದರಿಂದ ಸಾಗಣೆ ಅಡಚಣೆಯ ಆತಂಕ ಮಾರುಕಟ್ಟೆ ಚಲನವಲನಕ್ಕೆ ಕಾರಣವಾಗಿದೆ.

"ಉದ್ವಿಗ್ನತೆ ತ್ವರಿತವಾಗಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹಾರ್ಮುಜ್ ಜಲಸಂಧಿ ಕಾರ್ಯತಃ ಮುಚ್ಚಲ್ಪಟ್ಟಂತೆಯೇ ಇದೆ. ಇರಾನ್ ಈ ಪ್ರದೇಶದ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸುವ ಮನೋಭಾವ ತೋರಿಸುತ್ತಿರುವುದರಿಂದ ಮೇಲ್ಮುಖ ಅಪಾಯಗಳು ಉಳಿದಿವೆ. ಸಂಘರ್ಷ ದೀರ್ಘಕಾಲ ಮುಂದುವರಿಯುವ ಸಾಧ್ಯತೆ ಇದೆ," ಎಂದು ಐಜಿ ಮಾರುಕಟ್ಟೆ ವಿಶ್ಲೇಷಕ ಟೋನಿ ಸೈಕಾಮೋರ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries