ಕುವೈತ್ ಸಿಟಿ: ಕುವೈತ್ ವಾಯು ರಕ್ಷಣಾ ವ್ಯವಸ್ಥೆಯು ಭಾನುವಾರ ರಾತ್ರಿ ಅಮೆರಿಕದ ಮೂರು ಯುದ್ಧ ವಿಮಾನಗಳನ್ನು ಪ್ರಮಾದವಶಾತ್ ಹೊಡೆದುರುಳಿಸಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.
'ಆಪರೇಷನ್ ಎಪಿಕ್ ಫ್ಯೂರಿ' ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಮೂರು 'ಎಫ್-15ಇ' ಯುದ್ಧ ವಿಮಾನಗಳು ಕುವೈತ್‌ನಲ್ಲಿ ಪತನಗೊಂಡವು.
ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆಯು ತಪ್ಪಾಗಿ ಈ ವಿಮಾನಗಳನ್ನು ಹೊಡೆದುರುಳಿಸಿದೆ. ಪೈಲಟ್ ಸೇರಿದಂತೆ ಎಲ್ಲ ಆರು ಸಿಬ್ಬಂದಿ ಜಿಗಿದು ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
'ಈ ಪ್ರಮಾದವನ್ನು ಕುವೈತ್ ಒಪ್ಪಿಕೊಂಡಿದೆ. ಕುವೈತ್ ಭದ್ರತಾ ಪಡೆಗಳ ಪ್ರಯತ್ನಗಳು ಮತ್ತು ಈ ಕಾರ್ಯಾಚರಣೆಯಲ್ಲಿ ಅವರ ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ' ಎಂದು ಹೇಳಿದೆ.

