HEALTH TIPS

ಪೂರ್ವ ಚೀನಾ ಸಮುದ್ರದಲ್ಲಿ ನೌಕಾ ಚಟುವಟಿಕೆ: ಕ್ಷಿಪಣಿ ನಿಯೋಜಿಸಲು ಮುಂದಾದ ಜಪಾನ್

ಟೊಕಿಯೊ: ಪೂರ್ವ ಚೀನಾ ಸಮುದ್ರದಲ್ಲಿ ನೌಕಾ ಚಟುವಟಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತನ್ನ ರಕ್ಷಣೆಗಾಗಿ ಚೀನಾದ ನೈರುತ್ಯ ಪ್ರದೇಶದಲ್ಲಿ ದುರಗಾಮಿ ಹಾಗೂ ಪ್ರತಿದಾಳಿ ಮಾಡುವ ಕ್ಷಿಪಣಿಗಳನ್ನು ನಿಯೋಜಿಸಲಾಗುತ್ತದೆ ಎಂದು ಜಪಾನ್ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ನೆಲದಿಂದ ಹಡಗಿಗೆ ಚಿಮ್ಮುವ ಟೈಪ್-12 ಮಾದರಿಯ ಕ್ಷಿಪಣಿಗಳನ್ನು ಚೀನಾ ಗಡಿಗೆ ಹೊಂದಿಕೊಂಡಿರುವ ಕ್ಯುಶು ಪ್ರದೇಶದ ಕುಮಾಮೊಟೊ ಅಲ್ಲಿ ನಿಯೋಜಿಸಲು ಜಪಾನ್ ಸಿದ್ದವಾಗಿದೆ. ಈ ಕ್ಷಿಪಣಿಗಳು 1000 ಕಿ.ಮೀ ದೂರದವರೆಗೆ ನಿಖರ ದಾಳಿಯನ್ನು ಮಾಡಬಲ್ಲವು ಎಂದು ಸಂಪುಟ ಕಾರ್ಯದರ್ಶಿ ಮಿನೋರು ಕಿಹರಾ ಹೇಳಿದ್ದಾರೆ.

ಚೀನಾದ ನೌಕಾ ಚುಟುವಟಿಕೆಯ ಮೇಲೆ ನಿಗವಹಿಸಲು ನಾವು ಮುಂದಾಗಿದ್ದೇವೆ. ಜಪಾನ್‌ ಮೇಲೆ ನೇರ ದಾಳಿಗೆ ಮುಂದಾದರೆ ನಾವು ಅವರ ಮೇಲೆ ತಕ್ಷಣ ಕ್ಷಿಪಣಿ ದಾಳಿ ನಡೆಸುತ್ತೇವೆ. ಕ್ಷಿಪಣಿ ನಿಯೋಜನೆಯ ಕುರಿತು ರಕ್ಷಣಾ ಸಚಿವರು ಸ್ಥಳೀಯರಿಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಸನೇ ತಕೈಚಿ ಅವರು ಜಪಾನ್ ಪ್ರಧಾನಿಯಾದ ನಂತರ ತೈವಾನ್ ವಿಷಯದಿಂದಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವು ಮತ್ತಷ್ಟು ಹಳಸಿದೆ. ಚೀನಾವು, ಜಪಾನ್ ಮೇಲೆ ಆರ್ಥಿಕ ಒತ್ತಡ ಹೇರಿದ್ದಲ್ಲದೆ, ಅಲ್ಲಿಗೆ ತನ್ನ ನಾಗರಿಕರು ಭೇಟಿ ನೀಡದಂತೆ ಕ್ರಮ ತೆಗೆದುಕೊಳ್ಳುತ್ತಿದೆ.

ಜಪಾನ್‌ ಸೇನೆಯು ಕ್ಷಿಪಣಿ ನಿಯೋಜನೆ ಮಾಡುತ್ತಿರುವುದರಿಂದ ವೈರಿಗಳು ಆ ಸ್ಥಳವನ್ನು ಗುರಿಯಾಗಿಸಬಹುದು ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries