ಮಂಜೇಶ್ವರ: ಕಡಂಬಾರ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಯೋಜನಾ ನಿಧಿಯನ್ನು ಬಳಸಿ 1.09 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆರು ತರಗತಿ ಕೊಠಡಿಗಳ ಕಾಮಗಾರಿಯನ್ನು ಬುಧವಾರ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಚಾಲನೆ ನೀಡಿದರು.
ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎ. ತಾಜುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಪಿಟಿಎ ಅಧ್ಯಕ್ಷ ಮೊಯ್ದೀನ್ ಕುಂಞÂ, ಮುಖ್ಯ ಶಿಕ್ಷಕ ಎಂ. ಅಶೋಕ ಮತ್ತು ಅಬೂಬಕರ್ ಮಾಸ್ತರ್ ಮಾತನಾಡಿದರು.

.jpeg)
